ಕೊಲೊಂಬೊ, ಆ.04(DaijiworldNews/AK) ಭಾರತದ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಆರ್. ಪ್ರೇ ಮದಾಸ ಕ್ರೀ ಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿ ರೋಚಕ ಟೈ ನಲ್ಲಿ ಮುಕ್ತಾಯವಾಗಿತ್ತು. ಹೀಗಾಗಿ, ಈ ಪಂದ್ಯ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಲೆಕ್ಕಾಚಾರ ಎರಡೂ ತಂಡಗಳ ಗುರಿಯಾಗಿದೆ.
ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಭಾರತ ಕಣಕ್ಕಿಳಿಸಿದೆ. ಶ್ರೀಲಂಕಾ ಪಡೆಯಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ವನಿಂದು ಹಸರಂಗ ಹಾಗೂ ಮೊಹಮ್ಮದ್ ಶಿರಾಜ್ ಬದಲು ಕಮಿಂದು ಮೆಂಡಿಸ್ ಹಾಗೂ ಜೆಫ್ರೀ ವಂಡರ್ಸೇಗೆ ಸ್ಥಾನ ನೀಡಲಾಗಿದೆ.
ಇದೇ ಕ್ರೀ ಡಾಂ ಗಣದಲ್ಲಿ ನಡೆದ ಕಳೆದ ಪಂ ದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀ ಲಂಕಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ 230 ರನ್ ಗಳಿಸಿತ್ತು. ದುನಿತ್ ವೆಲ್ಲಾಳಗೆ ಅಜೇ ಯ 67 ರನ್ ಗಳಿಸಿದ್ದರು. ಈ ಗುರಿ ಬೆನ್ನತ್ತಿದ ಭಾರತ ಇನ್ನೂ 13 ಎಸೆತ ಬಾಕಿ ಇರುವಂತಯೇ 230 ರನ್ ಗಳಿಸಿ ಸಮಬಲ ಕಂಡಿತು.
ಭಾರತ: ರೋ ಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇ ಯಸ್ ಅಯ್ಯರ್, ಕೆ.ಎಲ್.ರಾಹುಲ್, ಶಿವಂ ದುಬೆ, ವಾಷಿಂ ಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀ ಪ್ಯಾದವ್, ಮೊಹಮ್ಮದ್ ಸಿರಾಜ್, ಅರ್ಶ ದೀ ಪ್ ಸಿಂ ಗ್
ಶ್ರೀ ಲಂಕಾ: ಚರಿತ ಅಸಲಂ ಕಾ (ನಾಯಕ), ಪಾಥುಮ್ ನಿಸ್ಸಾಂ ಕ, ಅವಿಷ್ಕ ಫರ್ನಾಂ ಡೊ, ಕುಶಾಲ್ ಮೆಂ ಡೀ ಸ್, ಸದೀ ರ ಸಮರವಿಕ್ರಮ, ಕಮಿಂದು ಮೆಂಡಿಸ್, ಜನಿತ್ ಲಿಯನಗೆ, ದುನಿತ್ ವೆಲ್ಲಾಳಗೆ, ಅಖಿಲ ಧನಂ ಜಯ, ಅಶಿತ ಫರ್ನಾಂ ಡೊ, ಜೆಫ್ರೀ ವಂ ಡರ್ಸೇ