ಉಡುಪಿ, ಜು.29(DaijiworldNews/AK): ಉಡುಪಿಯ ಭರವಸೆಯ ಯುವ ಕ್ರಿಕೆಟಿಗ ನಿಶ್ಚಿತ್ ನಾಗರಾಜ್ ಪೈ ಅವರು ಮಹಾರಾಜ ಟ್ರೋಫಿ 2024ರ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಹುಬ್ಬಳ್ಳಿ ಟೈಗರ್ಸ್ ಪರ ಆಡಲು ಆಯ್ಕೆಯಾಗಿದ್ದಾರೆ.
ಮಹಾರಾಜ ಟ್ರೋಫಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಆಯೋಜಿಸುವ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಒಂದಾಗಿದೆ. ಉಡುಪಿಯ ಶಿರಿಬೀಡು ವಾರ್ಡ್ ನಿವಾಸಿ ನಾಗರಾಜ್ ಪೈ ಮತ್ತು ಉಜ್ವಲಾ ಕಿರಣ್ ಪೈ ದಂಪತಿಯ ಎರಡನೇ ಪುತ್ರ ನಿಶ್ಚಿತ್ ಕ್ರೀಡೆಯಲ್ಲಿ ಅಸಾಧಾರಣ ಪ್ರತಿಭೆ ಮತ್ತು ಸಮರ್ಪಣಾ ಮನೋಭಾವವನ್ನು ತೋರಿದ್ದಾರೆ.
ನಿಶ್ಚಿತ್ ಯಾವಾಗಲೂ ಕರ್ನಾಟಕ ರಾಜ್ಯ ಮಟ್ಟದಲ್ಲಿ 14 ವರ್ಷದೊಳಗಿನ, 19 ವರ್ಷದೊಳಗಿನ ವಿಭಾಗಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರಿಸಿದ್ದಾರೆ. ಅವರು ಅಂಅವರು 19 ವರ್ಷದೊಳಗಿ ಭಾರತ ಎ ತಂಡದಲ್ಲಿಯೂ ಆಡಿದ್ದರು. ಚಿಕ್ಕಂದಿನಿಂದಲೂ ಯಶಸ್ವಿ ಕ್ರಿಕೆಟಿಗನಾಗಬೇಕೆಂಬ ಹಂಬಲವಿತ್ತು.
ಪ್ರಸ್ತುತ ನಿಶ್ಚಿತ್ ಜೈನ್ ಯೂನಿವರ್ಸಿಟಿ ಬೆಂಗಳೂರಿನಲ್ಲಿ ಎರಡನೇ ವರ್ಷದ ಬಿಕಾಂ ಅಧ್ಯಯನವನ್ನು ಮಾಡುತ್ತಿದ್ದಾರೆ.