ತಾಷ್ಕೆಂಟ, ಮೇ 27 (DaijiworldNews/AA): ಏಷ್ಯನ್ ಜಿಮ್ನಾಸ್ಟಿಕ್ ಚಾಂಪಿಯಶಿಪ್ನಲ್ಲಿ ಭಾರತದ ಸ್ಟಾರ್ ಅಥ್ಲೀಟ್ ದೀಪಾ ಕರ್ಮಾಕರ್ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇದರೊಂದಿಗೆ ಜಿಮ್ನಾಸ್ಟಿಕ್ ಚಾಂಪಿಯಶಿಪ್ನಲ್ಲಿ ಚಿನ್ನವನ್ನ ಪಡೆದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾನುವಾರ ನಡೆದ ಮಹಿಳೆಯರ ವಾಲ್ಟ್ ಸ್ಪರ್ಧೆಯಲ್ಲಿ ದೀಪಾ ಕರ್ಮಾಕರ್ ಅವರು ಸರಾಸರಿ 13.566 ಅಂಕ ಪಡೆದು ಅಗ್ರಸ್ಥಾನ ಗಳಿಸಿದರು. ಇನ್ನು ಈ ಜಿಮ್ನಾಸ್ಟಿಕ್ ಚಾಂಪಿಯಶಿಪ್ನಲ್ಲಿ ಉತ್ತರ ಕೊರಿಯಾದ ಕಿಮ್ ಸನ್ ಹ್ಯಾಂಗ್ ಬೆಳ್ಳಿ ಪದಕ ಹಾಗೂ ಕ್ಯೊಂಗ್ ಬ್ಯೊಲ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ದೀಪಾ ಅವರು 2015ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದರು. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್ ನಲ್ಲಿ ದೀಪಾ ಅವರು 4ನೇ ಸ್ಥಾನ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇನ್ನು ಈ ಬಾರಿ ನಡೆದ ಏಷ್ಯನ್ ಜಿಮ್ನಾಸ್ಟಿಕ್ ಚಾಂಪಿಯಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.