ಮುಂಬೈ, ಮೇ 24 (DaijiworldNews/ AK):ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಅವರು ಭಾರತದ ಮುಂದಿನ ಮುಖ್ಯ ಕೋಚ್ ಆಗಲು ತಮ್ಮನ್ನು ಸಂಪರ್ಕಿಸಿದರು, ಆದರೆ ಅದನ್ನು ತಿರಸ್ಕರಿಸಿದ್ದೇವೆ ಹೇಳಿಕೆ ನೀಡಿದ್ದರು. ಆದರೆ ಅವರ ಹೇಳಿಕೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿರುಗೇಟು ನೀಡಿದ್ದಾರೆ.
ನಾನು ಅಥವಾ ಬಿಸಿಸಿಐ ಯಾವುದೇ ಆಸ್ಟ್ರೇ ಲಿಯಾದ ಮಾಜಿ ಕ್ರಿಕೆಟಿಗರನ್ನು ಕೋಚಿಂಗ್ ಆಫರ್ ನೊಂದಿಗೆ ಸಂಪರ್ಕಿಸಿಲ್ಲ. ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿಗಳು ಸಂಪೂರ್ಣವಾಗಿ ತಪ್ಪು ಎಂದು ಶಾ ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಇದೇ ವೇಳೆ ಮುಂದಿನ ಕೋಚ್ ಭಾರತೀಯರೇ ಆಗಿರಬಹುದು ಎಂಬ ಸುಳಿವು ನೀಡಿದರು. ಕೋಚ್ ಆದವರು ದೇಶದ ಆಟದ ರಚನೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರಬೇಕು ಎಂದು ಶಾ ಹೇಳಿದರು.ಸದ್ಯ ಭಾರತ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅವಧಿ ಟಿ20 ವಿಶ್ವಕಪ್ ಅಂತ್ಯವಾಗುತ್ತದೆ. ದ್ರಾವಿಡ್ ಅವರು ಮೂರನೇ ಅವಧಿಗೆ ಆಸಕ್ತಿ ಹೊಂದಿಲ್ಲ ಎಂದು ಮಂಡಳಿಗೆ ತಿಳಿಸಿದ್ದಾರೆ.
ನಮ್ಮ ರಾಷ್ಟ್ರೀ ಯ ತಂಡಕ್ಕೆಭಾರತೀಯ ಕ್ರಿಕೆಟ್ ರಚನೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುವ ಮತ್ತು ಶ್ರೇಯಾಂಕಗಳ ಮೂಲಕ ಏರಿದ ವ್ಯಕ್ತಿಗಳನ್ನು ಗುರುತಿಸುವತ್ತ ಗಮನಹರಿಸಿದ್ದೇವೆ ಎಂದು ಹೇಳಿದರು.