ಅಹಮದಾಬಾದ್, ಮೇ 21 (DaijiworldNews/AA): ಐಪಿಎಲ್ 2024ರ ಮೊದಲ ಕ್ವಾಲಿಫೈಯರ್ ಪಂದ್ಯ ಇಂದು ಕೆಕೆಆರ್ ಹಾಗೂ ಸನ್ ರೈಸಸ್ ಹೈದರಾಬಾದ್ ನಡುವೆ ಅಹಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದ. ಈ ಪಂದ್ಯ ಆರಂಭಕ್ಕೂ ಮುನ್ನ ಕೆಕೆಆರ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಕೆಕೆಆರ್ ತಂಡದ ಸ್ಟಾರ್ ಓಪನರ್ ಅಲಭ್ಯವಾಗಿದ್ದಾರೆ.
ಹೌದು ಕೆಕೆಆರ್ ತಂಡದ ಸ್ಟಾರ್ ಓಪನರ್ ಫಿಲ್ ಸ್ಟಾಲ್ ಅವರು ಇಂಗ್ಲೆಡ್ ಗೆ ಮರಳಿದ್ದಾರೆ. ಕೆಕೆಆರ್ ತಂಡದ ಓಪರ್ಸ್ ಆದ ಸುನಿಲ್ ನರೈನ್- ಫಿಲ್ ಸಾಲ್ಟ್ ಅವರು ಪಂದ್ಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಇದೀಗ ಇಂದು ನಡೆಯುವ ಕ್ವಾಲಿಫೈಯರ್ ಪಂದ್ಯದಲ್ಲಿ ಫಿಲ್ ಅವರ ಸ್ಥಾನವನ್ನು ಯಾರು ನಿಭಾಯಿಸಲಿದ್ದಾರೆ ಎಂಬುದು ಕೆಕೆಆರ್ ಮುಂದಿರುವ ಪ್ರಶ್ನೆಯಾಗಿದೆ.
ಫಿಲ್ ಸಾಲ್ಟ್ ಅವರು ಈ ಆವೃತ್ತಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 4 ಅರ್ಧಶತಕಗಳು ಸೇರಿ ಒಟ್ಟು 435 ರನ್ ಗಳನ್ನು ಕಲೆಹಾಕಿದ್ದರು. ಆದರೆ ಟಿ20 ವಿಶ್ವಕಪ್ಗೂ ಮುನ್ನ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧ ಸರಣಿ ಆಡಲಿದೆ. ಈ ಹಿನ್ನಲೆ ಫಿಲ್ ಅವರು ತಮ್ಮ ತವರಾದ ಇಂಗ್ಲೆಂಡ್ ಗೆ ಮರಳಿದ್ದಾರೆ. ಸದ್ಯ ಫಿಲ್ ಅವರ ಬದಲಿಗೆ ಓಪನರ್ ಆಗಿ ಅಫ್ಘಾನಿಸ್ತಾನದ ಯುವ ಬ್ಯಾಟ್ಸ್ಮನ್ ರಹಮಾನುಲ್ಲಾ ಗುರ್ಬಾಜ್ ಅವರು ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.