ನವದೆಹಲಿ, ಮೇ. 15(DaijiworldNews/AK): ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನವನ್ನು ರಾಹುಲ್ ದ್ರಾವಿಡ್ ಮುಂದುವರಿಯಲು ಬಯಸದೇ ಹೋದರೆ ವಿವಿಎಸ್ ಲಕ್ಷ್ಮ ಣ್ ಅವರು ನೇಮಕವಾಗುವ ಸಾಧ್ಯತೆ ಇದೆ .
ಟಿ20 ವಿಶ್ವಕಪ್ ಟೂರ್ನಿಯ ಬಳಿಕ ದ್ರಾವಿಡ್ ಅವರ ಕಾರ್ಯಾವಧಿ ಮುಗಿಯಲಿದೆ. ನೂತನ ಕೋಚ್ ಆಯ್ಕೆಗೆ ಬಿಸಿಸಿಐ ಅರ್ಜಿಯನ್ನೂ ಆಹ್ವಾನಿಸಿದೆ. ಒಂದೊಮ್ಮೆ ದ್ರಾವಿಡ್ ಅವರು ಕೋಚ್ ಆಗಿ ಮುಂದುವರಿಯಲು ಬಯಿಸಿದರೆ, ಮತ್ತೊಮ್ಮೆ ಅರ್ಜಿ ಹಾಕಿ ಪ್ರಕ್ರಿಯೆಯ ಮೂಲಕವೇ ಆಯ್ಕೆಯಾಗಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದರು.
ಕಳೆದ ಮೂರು ವರ್ಷಗಳಿಂದ ರಾಷ್ಟ್ರೀ ಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಅವರು ಭಾರತ ತಂಡದಲ್ಲಿ ದ್ರಾವಿಡ್ ಅವರೊಂದಿಗೆ ಆಡಿದವರು. ಲಕ್ಷ್ಮಣ್ ಕೋಚ್ ಆಗಿಯೂ ಅನುಭವ ಹೊಂದಿದ್ದಾರೆ.
ಇನ್ನು ಕೋಚ್ ಸ್ಥಾನಕ್ಕೆ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್, ಆಸ್ಟ್ರೇ ಲಿಯಾದ ಜಸ್ಟಿನ್ ಲ್ಯಾಂಗರ್ , ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಆಗಿರುವ ಸ್ಟೀ ಫನ್ ಫ್ಲೆಮಿಂ ಗ್ ಅವರೂ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅರ್ಜಿ ಹಾಕಲು ಮೇ 27ರವರೆಗೆ ಸಮಯ ನಿಗದಿಪಡಿಸಲಾಗಿದೆ.