ಧರ್ಮಶಾಲಾ, ಮೇ 9 (DaijiworldNews/ AK): ಇದೀಗ ಗೆಲುವಿನ ಕಡೆ ವಾಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ತಂಡವನ್ನು ಇಂದು ನಡೆಯುವ ಇಂಡಿಯನ್ ಪ್ರೀ ಮಿಯರ್ ಲೀಗ್ ಪಂದ್ಯ ದಲ್ಲಿ ಎದುರಿಸಲಿದೆ. ಫಫ್ ಡುಪ್ಲೆ ಸಿ ತಂಡವು ನಾಲ್ಕನೇ ಗೆಲುವಿನ ಪ್ರಯತ್ನದಲ್ಲಿದೆ.
ಇತ್ತೀ ಚಿನ ಗೆಲುವುಗಳಿಂದ ಆರ್ಸಿಬಿ ತಂಡದ ಗೆಲವು ಹೆಚ್ಚು ವಿಶ್ವಾಸವನ್ನು ಮೂಡಿಸಿದ್ದು, , ಹತ್ತನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಏರಿದೆ. 11
ಪಂದ್ಯ ಗಳನ್ನು ಆಡಿ ಎಂಟು ಪಾಯಿಂಟ್ಸ್ ಅಷ್ಟೇ ಗಳಿಸಿದೆ. ಎಲ್ಲ ಗೆದ್ದರೂ ಪ್ಲೇ ಆಫ್ ಸಾಧ್ಯತೆ ಕಮ್ಮಿ . ಉಳಿದ ಮೂರೂ ಪಂದ್ಯ ಗೆದ್ದು ,ಇತರ ಪಂದ್ಯಗಳ ಫಲಿತಾಂಶ ತಾನು ಅಂದುಕೊಂಡ ಹಾಗೆ ಬರಲಿ ಅನ್ನುವುದು ಊಹಿಸಬೇಕಿದೆ.
ಪಂಜಾಬ್ ಕಿಂಗ್ಸ್ ಸಹ 11 ಪಂದ್ಯ ಗಳಿಂದ ಎಂಟು ಪಾಯಿಂಟ್ಸ್ ಪಡೆದಿದೆ. ಈ ಪಂದ್ಯದ ನಂತರ ಒಬ್ಬರಷ್ಟೇ 14 ಪಾಯಿಂಟ್ಸ್ ತಲುಪಲು ಸಾಧ್ಯ . ಸೋತ ತಂಡಕ್ಕೆ ಅಧಿಕೃತವಾಗಿ ಪ್ಲೇ ಆಫ್ ಬಾಗಿಲು ಮುಚ್ಚಲಿದೆ.
ಸತತ ಮೂರು ಪಂದ್ಯ ಗಳನ್ನು ಗೆದ್ದಿರುವ ಆರ್ಸಿಬಿ ಆತಿಥೇಯರಿಗಿಂತ ಹೆಚ್ಚು ವಿಶ್ವಾಸದಲ್ಲಿದೆ. ವಿರಾಟ್ ಕೊಹ್ಲಿ ಈ ಬಾರಿಯೂ ಸ್ಥಿರ ಪ್ರ ದರ್ಶನ ನೀಡುತ್ತಿದ್ದಾರೆ. ಮೊದಲ ಕೆಲವು ಪಂದ್ಯ ಗಳಲ್ಲಿ ಫ್ಲಾಪ್ ಆಗಿದ್ದ ಫಫ್ ಡುಪ್ಲೆ ಸಿ ಕೂಡ ಲಯಕ್ಕೆ ಮರಳಿದಂತಿದೆ. ವಿಲ್ ಜಾಕ್ಸ್, ಗುಜರಾತ್ ಟೈಟನ್ಸ್ ವಿರುದ್ಧ ಅಬ್ಬರಿಸಿದ್ದರು