ವಾಷಿಂಗ್ಟನ್, ಮೇ.6(DaijiworldNews/AA): ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇದ್ದು, ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ಈ ಬಾರಿ ಟೂರ್ನಿ ನಡೆಯುತ್ತಿದೆ. ಇದೀಗ ಈ ಬಾರಿಯ ಟೂರ್ನಿಯ ಮೇಲೆ ಉಗ್ರರ ಕರಿನೆರಳು ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.
ಟೂರ್ನಿಯ ಸಹ ಆತಿಥ್ಯ ವಹಿಸಿರುವ ವೆಸ್ಟ್ ಇಂಡೀಸ್ ದೇಶಕ್ಕೆ ಉತ್ತರ ಪಾಕಿಸ್ತಾನದಿಂದ ಭಯೋತ್ಪಾದನಾ ದಾಳಿ ಬೆದರಿಕೆ ಬಂದಿದೆ. ಬೆದರಿಕೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಂದಾಗಿದೆ.
ಜೂನ್ 1ರಿಂದ 29ರವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಈ ಬಾರಿಯ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಇದರ ಮೇಲೆ ಉಗ್ರರ ಕಣ್ಣು ಬಿದ್ದಿದ್ದು, ಐಎಸ್ ಖೋರಸನ್ ಉಗ್ರ ಸಂಘಟನೆಯು ದಾಳಿಗೆ ಸಂಚು ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.