ಮುಂಬೈ, ಮೇ.4(DaijiworldNews/AA): ವೆಸ್ಟ್ ಇಂಡೀಸ್ ನ ಮಾಜಿ ಆಲ್ರೌಂಡರ್ ಡೆವೊನ್ ಅವರ ದಾಖಲೆಯನ್ನು ಪಿಯೂಷ್ ಚಾವ್ಲಾ ಅವರು ಸರಿಗಟ್ಟುವ ಮೂಲಕ 2ನೇ ಸ್ಥಾನಕ್ಕೆ ಏರಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಬ್ರಾವೊ ಇದ್ದರು. ಇದೀಗ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ 51ನೇ ಪಂದ್ಯದ ಮೂಲಕ ಪಿಯೂಷ್ ಚಾವ್ಲಾ ಅವರು ಬ್ರಾವೋ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರಿದ್ದಾರೆ.
ಐಪಿಎಲ್ ನಲ್ಲಿ 158 ಇನಿಂಗ್ಸ್ ಗಳಲ್ಲಿ ಲಿಂಗ್ ಮಾಡಿರುವ ಡ್ವೇನ್ ಬ್ರಾವೊ ಒಟ್ಟು 3119 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 4360 ರನ್ ಗಳನ್ನು ನೀಡುವ ಮೂಲಕ ಒಟ್ಟು 183 ವಿಕೆಟ್ ಕಬಳಿಸಿ 2ನೇ ಸ್ಥಾನ ಗಳಿಸಿದ್ದರು.
188 ಐಪಿಎಲ್ ಇನಿಂಗ್ಸ್ ಗಳಲ್ಲಿ ಬೌಲಿಂಗ್ ಮಾಡಿರುವ ಚಾವ್ಲಾ 3784 ಎಸೆತಗಳಲ್ಲಿ 5018 ರನ್ ನೀಡಿ ಒಟ್ಟು 184 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಪಿಯೂಷ್ ಚಾವ್ಲಾ ಅವರು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.