ಚೆನ್ನೈ, ಏ. 18(DaijiworldNews/AA): ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಸಿಎಸ್ ಕೆ ತಂಡದ ಸ್ಟಾರ್ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೇ ಅವರು ಇಂಜುರಿಯಿಂದ ಇನ್ನು ಚೇತರಿಸಿಕೊಳ್ಳದೇ ಇರುವುದರಿಂದ ಪೂರ್ತಿ ಆವೃತ್ತಿಯಿಂದಲೇ ಹೊರಗುಳಿದಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನ ತಮ್ಮ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಡೆವೊನ್ ಕಾನ್ವೇ ಅವರು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರೂ. ಶಸ್ತ್ರಚಿಕಿತ್ಸೆಯ ಬಳಿಕ ಕೆಲ ವಾರಗಳು ಅಂದರೆ ಐಪಿಎಲ್ ಮೊದಲಾರ್ಧದ ಪಂದ್ಯದಲ್ಲಿ ಭಾಗವಹಿಸುವುದಿಲ್ಲ. ದ್ವಿತೀಯಾರ್ಧದ ಭಾಗದಲ್ಲಿ ಭಾಗವಹಿಸುತ್ತಾರೆ ಎಂದು ವರದಿಯಾಗಿತ್ತು. ಆದರೆ ಇದೂಗ ಅವರು ಈ ಬಾರಿಯ ಪೂರ್ತಿ ಆವೃತ್ತಿಯಿಂದಲೇ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸಿಎಸ್ ಕೆ ಫ್ರಾಂಚೈಸಿ ವಿಷೇಶ ಎಂಬಂತೆ ಬ್ಯಾಟರ್ ಬದಲಿಗೆ ಬೌಲರ್ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ. ಡೆವೊನ್ ಕಾನ್ವೇ ಬದಲಿಗೆ ಬೌಲರ್ ಇಂಗ್ಲೆಂಡ್ ನ ರಿಚರ್ಡ್ ಗ್ಲಿಸನ್ ಅವರು ತಂಡದ ಪರ ಆಡಲಿದ್ದಾರೆ.