ಬೆಂಗಳೂರು,ಏ. 16(DaijiworldNews/AK): ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ 6 ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉಳಿದಿರುವ ಮುಂದಿನ 7 ಪಂದ್ಯಗಳನ್ನು ಸೆಮಿಫೈನಲ್ ರೀತಿ ಭಾವಿಸಿ ಆಡಬೇಕಿದೆ ಎಂದು ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ.
ಹೈದರಾಬಾದ್ ವಿರುದ್ಧ 25 ರನ್ಗಳ ಸೋಲು ಕಂಡ ಆರ್ಸಿಬಿ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಪ್ರತೀ ಪಂದ್ಯವೂ ಈಗ ನಮಗೆ ಸೆಮಿಫೈನಲ್ ಇದ್ದಂತೆ. ನಾವು ಬಲಿಷ್ಠವಾಗಿ ಮರಳಿ ಬರುವ ಬಗ್ಗೆ ಯೋಚಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಸೋ ಮವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ಬೌಲರ್ಸ್ಗಳ ಬಾಲ್ಳಿಗೆ ಹೈದರಾಬಾದ್ ಬ್ಯಾಟರ್ಸ್ ಗಳು 287 ರನ್ ದಾಖಲೆಯ ಮೊತ್ತ ಕಲೆಹಾಕಿದ್ದರು. ಆ ದಿನ ಅತ್ಯಂ ತ ಕಠಿಣವಾಗಿತ್ತು ಎಂಬುದನ್ನು ಆ್ಯಂಡಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಸೋಲಿನಲ್ಲೂ ಅಬ್ಬರಿಸಿದ ಆರ್ಸಿಬಿ ಬ್ಯಾಟರ್ಗಳ ಧನಾತ್ಮಕ ಪ್ರವೃತ್ತಿಯನ್ನು ಮೆಚ್ಚಿಕೊಂಡಿದ್ದಾರೆ. ಈ ಪಂ ದ್ಯದಲ್ಲಿ ದಿನೇ ಶ್ ಕಾರ್ತಿ ಕ್ 35 ಎಸೆತಗಳಲ್ಲಿ 83 ರನ್ ಸಿಡಿಸಿದರೆ, ಡುಪ್ಲೆಸಿ 28 ಎಸೆತಗಳಲ್ಲಿ 62 ರನ್ ಬಾರಿಸಿದ್ದರು.