ಮೊಹಾಲಿ, ಏ. 15(DaijiworldNews/AA): ಪಂಜಾಬ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ನಾಯಕ ಶಿಖರ್ ಧವನ್ ಅವರು ಮುಂದಿನ 2 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
ಶಿಖರ್ ಅವರು ಭುಜದ ನೋವಿನ ಕಾರಣ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಮುಂಬರುವ ಕೆಲ ಪಂದ್ಯಗಳಲ್ಲಿ ಅವರು ಆಡುವುದು ಅನುಮಾನ ಎಂದು ಕೋಚ್ ಸಂಜಯ್ ಬಂಗಾರ್ ಮಾಹಿತಿ ನೀಡಿದ್ದಾರೆ.
ಸದ್ಯ ಶಿಖರ್ ಧವನ್ ಕನಿಷ್ಠ 7ರಿಂದ 10 ದಿನಗಳ ಕಾಲ ಮೈದಾನದಿಂದ ಹೊರಗುಳಿಯಲಿದ್ದಾರೆ. ಈ ಮಧ್ಯೆ ಪಂಜಾಬ್ ಕಿಂಗ್ಸ್ ತಂಡವು 2 ಪಂದ್ಯಗಳನ್ನಾಡಲಿವೆ. ಈ ಎರಡು ಪಂದ್ಯಗಳಿಗೂ ಶಿಖರ್ ಅವರು ಲಭ್ಯವಿರುವುದಿಲ್ಲ್ ಎಂದು ತಿಳಿದುಬಂದಿದೆ.
ಇನ್ನು ಶಿಖರ್ ಅವರ ಅನುಪಸ್ಥಿತಿಯಲ್ಲಿ ಮುಂದಿನ ಎರಡು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಹಂಗಾಮಿ ನಾಯಕ ಸ್ಯಾಮ್ ಕರನ್ ಮುನ್ನಡೆಸಲಿದ್ದಾರೆ. ಶಿಖರ್ ಅವರ ಅನುಪಸ್ಥಿತಿಯಲ್ಲಿ ಯುವ ಆಲ್ರೌಂಡರ್ ಸ್ಯಾಮ್ ಕರನ್ ತಂಡದ ನಾಯಕತ್ವವನ್ನು ಹೇಗೆ ನಿಭಾಯಿಸಲಿದ್ದಾರೆ ಎಂದು ಕಾದುನೋಡಬೇಕಿದೆ.