ಕೋಲ್ಕತ್ತ,ಏ. 14(DaijiworldNews/AK): ಈಡಾನ್ ಗಾರ್ಡನ್ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಟೂರ್ನಿ ಯ ಲಖನೌ ಸೂಪರ್ ಜೈಂ ಟ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೋಲ್ಕತ್ತ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಸಲ ಕೆಕೆಆರ್ ವೇಗಿ ಹರ್ಷಿತ್ ರಾಣಾ ಅವರಿಗೆ ಅವಕಾಶ ಕೊಟ್ಟಿದೆ. ಲಖನೌ ತಂಡವು ನವೀನ್ ಉಲ್ ಹಕ್ ಮತ್ತು ದೇವದತ್ತ ಪಡಿಕ್ಕಲ್ ಅವರನ್ನು ಹೊರಗಿಟ್ಟಿದ್ದು, ಶಮರ್ ಜೋಸೆಫ್ ಮತ್ತು ದೀ ಪಕ್ಹೂಡಾ ಅವರನ್ನುತಂಡಕ್ಕೆ ಸೇರಿಸಿಕೊಂಡಿದೆ.
ಈ ಪಂದ್ಯದ ಮೂಲಕ ಭಾರತದಲ್ಲಿ ಟಿ–20 ಕ್ರಿಕೆಟ್ನಲ್ಲಿ ವೈಯಕ್ತಿಕ 5000 ರನ್ ಗಳಿಸಿದ ಸಾಧನೆ ಮಾಡುವತ್ತ 99 ರನ್ಗಳ ಅಗತ್ಯವಿರುವ ಕೆ.ಎಲ್. ರಾಹುಲ್ ರನ್ ಗಳಿಸು ಕಡೆ ಗಮನ ಸರಿಸಲಿದ್ದಾರೆ.
ಹಿಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ 7 ವಿಕೆಟ್ಗಳ ಸೋ ಲು ಕಂಡಿರುವ ಕೆಕೆಆರ್ ಮತ್ತು ಡೆಲ್ಲಿ ವಿರುದ್ಧ 6 ವಿಕೆಟ್ಗಳ ಸೋಲುಂಡಿರುವ ಎಲ್ಎಸ್ಜಿ ಗೆಲುವಿಗಾಗಿ ಹೋರಾಟ ನಡೆಸಲಿವೆ. ಅಂಕಪಟ್ಟಿಯಲ್ಲಿ ಕೆಕೆಆರ್ 2ನೇ ಸ್ಥಾನದಲ್ಲಿದ್ದು, ಡೆಲ್ಲಿ ಎಲ್ಎಸ್ ಜಿ 4ನೇ ಸ್ಥಾನದಲ್ಲಿದೆ.