ಪರ್ತ್, ಏ 07 (DaijiworldNews/AK):ಭಾರತದ ಪುರುಷರ ಹಾಕಿ ತಂಡ ಮೊದಲ ಪಂದ್ಯಕ್ಕಿಂತ ಸ್ವಲ್ಪ ಮಟ್ಟಿಗೆ ಸಾಧರಣ ಪ್ರದರ್ಶನ ನೀಡಿದರೂ, ಆಸ್ಟ್ರೇ ಲಿಯಾ ವಿರುದ್ಧ ಭಾನುವಾರ ನಡೆದ ಎರಡನೇ ಹಾಕಿ ಟೆಸ್ಟ್ ಪಂದ್ಯದಲ್ಲಿ 2–4 ಗೋಲುಗಳಿಂದ ಸೋಲು ಪಡೆದರು.
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 1–5 ಗೋಲುಗಳ ಮೂಲಕ ಹೀನಾಯ ಸೋಲಾಗಿತ್ತು. ಆದರೆ ಈ ಪಂದ್ಯದಲ್ಲಿ ಬಲಾಢ್ಯ ಎದುರಾಳಿಗಳ ವಿರುದ್ಧ ಮೊದಲ ಮತ್ತು ಎರಡನೇ ಕ್ವಾರ್ಟರ್ನಲ್ಲಿ ಭಾರತದ ಆಟಗಾರರು ಸಮನಾಗಿಯೇ ಆಡಿದರು. ಆದರೆ ಮತ್ತೆ ವಿರಾಮದ ವೇಳೆಗೆ ಭಾರತ ತಂಡವೇ 2–1 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು. ಆದರೆ ವಿರಾಮದ ನಂತರ ರಕ್ಷಣಾ ವಿಭಾಗದಲ್ಲಿ ಹುಳುಕುಗಳು ಕಂಡುಬಂದು, ಆತಿಥೇಯರು ಮೂರು ಗೋಲುಗಳನ್ನು ಗಳಿಸಿ ಮೇಲುಗೈ ಸಾಧಿಸಿದರು.
ಜೆರೆಮಿ ಹೇ ವಾರ್ಡ್ (6 ಮತ್ತು 34ನೇ ನಿಮಿಷ) ಅವರು ಎರಡು ಪೆನಾಲ್ಟಿ ಕಾರ್ನ ರ್ಗಳನ್ನು ಗೋಲಾಗಿ ಪರಿವರ್ತಿಸಿದರು. ಜಾಕೋಬ್ ಆ್ಯಂಡರ್ಸ ನ್ (42ನೇ ನಿಮಿಷ) ಮತ್ತು ನೇಥನ್ ಇಪ್ರೇ ಮ್ಸ್ (45ನೇ) ಅವರು ಆಸ್ಟ್ರೇ ಲಿಯಾಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಭಾರತದ ಪರ ಜುಗರಾಜ್ ಸಿಂ ಗ್ (9ನೇ ನಿಮಿಷ) ಮತ್ತು ನಾಯಕ ಹರ್ಮ ನ್ಪ್ರೀ ತ್ ಸಿಂ ಗ್ (30ನೇ ನಿಮಿಷ) ಅವರು ಗೋಲ್ ಸ್ಕೋರ್ ಮಾಡಿದರು. ಎರಡೂ ಗೋಲುಗಳು ಪೆನಾಲ್ಟಿ ಕಾರ್ನ ರ್ಗಳ ಮೂಲಕ ಬಂದವು.ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯ ಏಪ್ರಿಲ್ 10ರಂದು ನಡೆಯಲಿದೆ.