ಇಸ್ಲಾಮಾಬಾದ್, ಏ 04(DaijiworldNews/AA): ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಮಾಜಿ ಪತಿ ಶೋಯಿಬ್ ಮಲಿಕ್ ಅವರು 2ನೇ ಮದುವೆ ಬಳಿಕವೂ ನಟಿಯೊಂದಿಗೆ ಫ್ಲರ್ಟ್ ಮಾಡುತ್ತಿದ್ದಾರೆಂದು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಪಾಕ್ ನಟಿ ನವಾಲ್ ಸಯೀದ್ ಅವರು ಕಾರ್ಯಕ್ರಮವೊಂದರಲ್ಲಿ, ಮದುವೆಯಾದ ಕ್ರಿಕೆಟಿಗರು ತಮಗೆ ಮೆಸೇಜ್ ಮಾಡುತ್ತಾರೆ ಎಂದು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ನಟಿಯ ಹೇಳಿಕೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಪ್ರಾರಂಭವಾಗಿದೆ. ಹಾಗೇ ನಟಿ ಶೋಯಿಬ್ ಅವರು ಈ ರೀತಿಯಾಗಿ ಮೆಸೇಜ್ ಮಾಡುತ್ತಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಪಾಕ್ ನ ಕ್ರಿಕೆಟ್ ಆಟಗಾರನಾಗಿದ್ದ ಶೋಯಿಬ್ ಅವರು ಸಾನಿಯಾ ಮಿರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇವರಿಬ್ಬರ ಮಧ್ಯೆ ಬಿರುಕುಂಟಾಗಿ ಬೇರ್ಪಟ್ಟಿದ್ದರು. ಬಳಿಕ ಈ ವರ್ಷದ ಪ್ರಾರಂಭದಲ್ಲಿ ಶೋಯಿಬ್ ಅವರು ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದರು. ಇದೀಗ 2ನೇ ಮದುವೆ ಬಳಿಕ ಬೇರೆ ನಟಿಯೊಂದಿಗೆ ಫ್ಲರ್ಟ್ ಮಾಡಲು ಪ್ರಾರಂಭಿಸಿದರೇ ಎಂಬ ಅನುಮಾನ ಉಂಟಾಗಿದೆ.