ಲಕ್ನೋ, ಮಾ 30(DaijiworldNews/AA): ಇಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೂ ಮುನ್ನವೇ ಲಕ್ನೋ ತಂಡಕ್ಕೆ ಹೊಸ ಆಟಗಾರ ಎಂಟ್ರಿ ನೀಡಿದ್ದಾರೆ.
ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಇಂಗ್ಲೆಂಡ್ನ ಅನುಭವಿ ವೇಗದ ಬೌಲರ್ ಡೇವಿಡ್ ವಿಲ್ಲಿ ಅವರು ಹೊರಬಿದ್ದಿದ್ದು, ಇದೀಗ ಅವರ ಬದಲಾಗಿ ನ್ಯೂಜಿಲೆಂಡ್ನ ಮ್ಯಾಟ್ ಹೆನ್ರಿ ಲಕ್ನೋ ತಂಡವನ್ನು ಸೇರಿದ್ದಾರೆ.
ಈ ಮೊದಲು ಡೇವಿಡ್ ವಿಲ್ಲಿ ಅವರು ಪಂದ್ಯಾವಳಿಯ ಮೊದಲಾರ್ಧದಲ್ಲಿ ಮಾತ್ರ ಆಡುವುದಿಲ್ಲ ಎನ್ನಲಾಗಿತ್ತು. ಆ ಬಳಿಕ ಈ ಬಾರಿಯ ಸಂಪೂರ್ಣ ಐಪಿಎಲ್ ಆವೃತ್ತಿಯಿಂದಲೇ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಡೇವಿಡ್ ವಿಲ್ಲಿ ಅವರ ಬದಲಾಗಿ ಲಕ್ನೋ ಫ್ರಾಂಚೈಸ್ ಮ್ಯಾಟ್ ಹೆನ್ರಿ ಅವರನ್ನು ತಂಡಕ್ಕೆ ಬರಮಾಡಿಕೊಂಡಿದೆ.
ಇನ್ನು ಲಕ್ನೋ ಫ್ರಾಂಚೈಸ್ ಡೇವಿಡ್ ವಿಲ್ಲಿ ಅವರನ್ನು 2 ಕೋಟಿ ಮೂಲ ಬೆಲೆಗೆ ಖರೀಸಿತ್ತು. ಆದರೆ ಇದೀಗ ಮ್ಯಾಟ್ ಹೆನ್ರಿ ಅವರನ್ನು 1 ಕೋಟಿ 25 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಈ ಮೂಲಕ 75 ಲಕ್ಷ ರೂ. ಹಣವನ್ನು ಉಳಿತಾಯ ಮಾಡಿದೆ.