ವದೆಹಲಿ, 17(DaijiworldNews/ AK): ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಅತ್ಯುತ್ತಮ ಆಟ ಪ್ರದರ್ಶನ ನೀಡಿದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಈ ಟೂರ್ನಿಯಲ್ಲಿ ಒಟ್ಟು13 ವಿಕೆಟ್ ಪಡೆಯುವ ಮೂಲಕ ನೇರಳೆ ಕ್ಯಾಪ್ ಪಡೆದಿದ್ದಾರೆ. ಕೈಗೆ ಗಾಯಗೊಂಡ ಪರಿಣಾಮ ಶ್ರೇಯಾಂಕಾ ಪಾಟೀಲ್ 2 ಪಂದ್ಯ ಆಡಿರಲಿಲ್ಲ. ಹೀಗಾಗಿ ಕೇವಲ 8 ಪಂದ್ಯವಾಡಿ 13 ವಿಕೆಟ್ ಕಿತ್ತು ವಿಶೇಷ ಸಾಧನೆ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಈ ಟೂರ್ನಿಯ ಉದಯೋನ್ಮುಖ ಆಟಗಾರ್ತಿಎಂಬ ಪ್ರಶಸ್ತಿಯನ್ನು 21 ವರ್ಷದ ಶ್ರೇಯಾಂಕಾ ಪಾಟೀಲ್ ಗೆದ್ದುಕೊಂಡಿದ್ದಾರೆ. ಈ ಪ್ರಶಸ್ತಿ ಸಿಗಲು ಕಾರಣ ಇದೆ. ಆರಂಭದ ಪಂದ್ಯಗಳಲ್ಲಿ ಶ್ರೇಯಾಂಕಾ ಪಾಟೀಲ್ ಬೌಲಿಂಗ್ ಲಯ ಕಂಡುಕೊಳ್ಳಲು ವಿಫಲರಾಗಿದ್ದರೂ ಕೊನೆ ಕೊನೆಗೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು.
ಮುಂಬೈ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ 4 ಓವರ್ ಎಸೆದು 16 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಮುಂಬೈ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು.