ಮುಂಬೈ, 16(DaijiworldNews/ AK): ಕಳೆದ ಕೆಲವು ದಿನಗಳಿಂದ 17ನೇ ಆವೃತ್ತಿಯ ಐಪಿಎಲ್ ಆಯೋಜನೆಗೆ ಸಂಬಂಧಿಸಿದಂತೆ ಹಬ್ಬಿದ್ದ ಗಾಳಿ ಸುದ್ದಿಗೆ ಅಂತಿಮವಾಗಿ ತೆರೆಬಿದ್ದಿದೆ.ಈ ಬಾರಿಯ ಐಪಿಎಲ್ ವಿದೇಶಿದಲ್ಲಿ ನಡೆಯಲ್ಲಿದೆ ಎಂಬ ವದಂತಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬ್ರೇಕ್ ಹಾಕಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ನಂತರ ಮಾತನಾಡಿರುವ ಜಯ್ ಶಾ, ಈ ಬಾರಿಯ ಐಪಿಎಲ್ ಅನ್ನು ವಿದೇಶಕ್ಕೆ ಸ್ಥಳಾಂತರಿಸಲಾಗುವುದಿಲ್ಲ ಎಂದು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.
ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಗಮನಿಸಿದ ನಂತರ ಮೊದಲಾರ್ಧದ ಐಪಿಎಲ್ ಮುಗಿದ ಬಳಿಕ ಉಳಿದಾರ್ಧದ ಐಪಿಎಲ್ ಅನ್ನು ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸುತ್ತದೆ ಎಂದು ವರದಿಯಾಗಿತ್ತು.
ಇದೀಗ , 2024 ರ ಸಂಪೂರ್ಣ ಆವೃತ್ತಿಯು ಭಾರತದಲ್ಲಿ ನಡೆಯಲಿದೆ ಎಂದು ಜಯ್ ಶಾ ಖಚಿತಪಡಿಸಿದ್ದಾರೆ ಎಂದು ಕ್ರಿಕ್ಬಜ್ ವರದಿ ಮಾಡಿದೆ. ಹೀಗಾಗಿ ಟೂರ್ನಿಯನ್ನು ಕಣ್ತುಂನಿಕೊಳ್ಳುವುದನ್ನು ಮಿಸ್ ಮಾಡಿಕೊಳ್ಳುವ ಆತಂಕದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಸಿಕ್ಕಂತ್ತಾಗಿದೆ. ಐಪಿಎಲ್ನ 17 ನೇ ಆವೃತ್ತಿಯ ಮೊದಲಾರ್ಧದಲ್ಲಿ 21 ಪಂದ್ಯಗಳು ನಡೆಯಲ್ಲಿದ್ದು, ಮಾರ್ಚ್ 22 ರಂದು ಆರಂಭವಾಗಲಿರುವ ಲೀಗ್ನ ಮೊದಲ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳು ಮುಖಾಮುಖಿಯಾಗಲಿವೆ.