ಬೆಂಗಳೂರು, ಮಾ 10(DaijiworldNews/AK):ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರ ಅಂತರದಲ್ಲಿ ಟೀಮ್ ಇಂಡಿಯಾ, ಐಸಿಸಿ ಟೆಸ್ಟ್ ತಂಡ ರ್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಏರಿದೆ.
ಈ ಮೂಲಕ ಎಲ್ಲ ಮೂರು ಮಾದರಿಗಳಲ್ಲೂ (ಟೆಸ್ಟ್, ಏಕದಿನ ಹಾಗೂ ಟ್ವೆಂ ಟಿ-20) ಅಗ್ರಸ್ಥಾನ ಪಟ್ಟಕ್ಕೇರಿದೆ.ಆಸ್ಟೇಲಿಯಾವನ್ನು ಹಿಂದಿಕ್ಕಿರುವ ರೋಹಿತ್ ಶರ್ಮಾ ನೇತೃತ್ವದ ತಂಡ ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇ ರಿದೆ. ಭಾರತ ಈಗ 122 ರೇಟಿಂಗ್ ಪಾಯಿಂಟ್ ಹೊಂದಿದೆ. ಆಸ್ಟ್ರೇ ಲಿಯಾ 117 ರೇಟಿಂಗ್ ಪಾಯಿಂಟ್ನೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇನ್ನೊಂದೆಡೆ ಭಾರತ ವಿರುದ್ಧದ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಇಂಗ್ಲೆಂಡ್ 111 ರೇಟಿಂಗ್ ಪಾಯಿಂಟ್ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ.
ಪ್ರಸ್ತುತ ನಡೆಯುತ್ತಿರುವ ಕ್ರೈ ಸ್ಟ್ಚರ್ಚ್ ನಲ್ಲಿ ಆಸ್ಟ್ರೇ ಲಿಯಾ-ನ್ಯೂಜಿಲೆಂಡ್ ನಡುವಣ ಪಂದ್ಯದ ಫಲಿತಾಂಶ ಏನೇ ಬಂದರೂ ಭಾರತವೇ ಅಗ್ರಸ್ಥಾನದಲ್ಲಿಯೇ ಇರಲಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
ಏಕದಿನ ಹಾಗೂ ಟ್ವೆಂ ಟಿ-20 ರ್ಯಾಂಕಿ ಗ್ ಪಟ್ಟಿಯಲ್ಲೂ ಭಾರತವೇ ಅಗ್ರಸ್ಥಾನದಲ್ಲಿದೆ. ಏಕದಿನದಲ್ಲಿ ಭಾರತ 121 ರೇಟಿಂಗ್ ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, 118 ರೇಟಿಂಗ್ ಮೂಲಕ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ .ಇತ್ತ ಚುಟುಕು ಕ್ರಿಕೆಟ್ನಲ್ಲಿ ಕೂಡ ಭಾರತ 266 ರೇಟಿಂಗ್ ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್ ಎರಡು (256) ಹಾಗೂ ಆಸ್ಟ್ರೇ ಲಿಯಾ ಮೂರನೇ (255) ಸ್ಥಾನದಲ್ಲಿದೆ.