ಧರ್ಮಶಾಲಾ, ಮಾ 09 (DaijiworldNews/ AK): ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯು ಇಂದು ಮುಗಿದಿದೆ. ಸರಣಿಯನ್ನು ರೋಹಿತ್ ಶರ್ಮಾನೇತೃತ್ವದ ಭಾರತ ತಂಡವು 4-1ರಿಂದ ಗೆದ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತವು ಉಳಿದ ಮೂರು ಪಂದ್ಯಗಳಲ್ಲಿಜಯಭೇರಿ ಬಾರಿಸಿದೆ.
ಈ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್ ಆಟಗಾರರಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ‘ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹ ಯೋಜನೆ ಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಕ್ಸ್ನಲ್ಲಿ ಘೋಷಣೆ ಮಾಡಿರುವುದನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಒಂದು ಋತುವಿನಲ್ಲಿ ಭಾರತಕ್ಕಾಗಿ ಶೇಕಡಾ 75 ಕ್ಕಿಂ ತ ಹೆಚ್ಚು ಟೆಸ್ಟ್ಗಳನ್ನು ಆಡುವ ಆಟಗಾರರು ಪ್ರತಿ ಟೆಸ್ಟ್ ಪಂದ್ಯಕ್ಕೆ 45 ಲಕ್ಷ ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಾರೆ. ಸದ್ಯ ಪ್ರತಿ ಟೆಸ್ಟ್ ಕ್ರಿಕೆಟಿಗನಿಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ 15 ಲಕ್ಷ
ಪಂದ್ಯ ಶುಲ್ಕವನ್ನು ಪಾವತಿಸುತ್ತದೆ.
ಹೊಸ ಯೋಜನೆಯು 2022-23 ಋತುವಿನಿಂದ ಜಾರಿಗೆ ಬರುತ್ತದೆ, ಅಂದರೆ ಮಂಡಳಿಯು ಟೆಸ್ಟ್ ಆಟಗಾರರಿಗೆ ಬಾಕಿ ಹಣವನ್ನುಹಸ್ತಾಂತರಿಸುತ್ತದೆ. ಈ ಯೋಜನೆಗಾಗಿ ಬಿಸಿಸಿಐ ಪ್ರತಿ ಋತುವಿನಲ್ಲಿ 40 ಕೋಟಿ ರೂ.ಗಳ ಹೆಚ್ಚುವರಿ ಹಣವನ್ನು ಖರ್ಚು ಮಾಡಲಿದೆ.
ಒಂದು ಋತುವಿನಲ್ಲಿ ಶೇಕಡಾ 75 ಕ್ಕಿಂ ತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 45 ಲಕ್ಷರೂಪಾಯಿಗಳ ಹೆಚ್ಚುವರಿ ಶುಲ್ಕವನ್ನು ನೀಡಲಾಗುತ್ತದೆ. ಶೇಕಡಾ 75 ಕ್ಕಿಂ ತ ಹೆಚ್ಚು ಸರಣಿಯಲ್ಲಿದ್ದರೂ ಆಡುವ ಬಳಗದಲ್ಲಿ ಇರದಿದ್ದವರು ಸಹ ಪ್ರತಿ ಪಂದ್ಯಕ್ಕೆ ಹೆಚ್ಚುವರಿ ಪಂದ್ಯ ಶುಲ್ಕವಾಗಿ 22.5 ಲಕ್ಷ ರೂಪಾಯಿಗಳನ್ನು ಪಡೆಯಲಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ದೇಶೀಯ ಪಂದ್ಯಾವಳಿಗಳಿಗೆ, ವಿಶೇಷವಾಗಿ ರಣಜಿ ಟ್ರೋ ಫಿಗೆ ಆದ್ಯತೆ ನೀಡಲು ಗುತ್ತಿಗೆ ಆಟಗಾರರಿಗೆ ಒತ್ತು ನೀಡಿದ ಕೆಲವು ದಿನಗಳ ಬಳಿಕ ಈ ಕ್ರಮವು ಬಂದಿದೆ.