ಬೆಂಗಳೂರು, ಮಾ 07 (DaijiworldNews/AA): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್ ನೊಂದಿಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗಿದೆ.
17 ನೇ ಆವೃತ್ತಿಯ ಐಪಿಎಲ್ ನಲ್ಲಿ ಕೊನೆಯ ಬಾರಿ ಕಣಕ್ಕಿಳಿಯುವ ಮೂಲಕ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಲು ನಿರ್ಧಾರ ಮಾಡಿದ್ದಾರೆ. ಆದ್ದರಿಂದ ಇದು ಅವರ ಕೊನೆಯ ಐಪಿಎಲ್ ಆವೃತ್ತಿಯಾಗಿರಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಡಿಕೆ 2008 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಈಗಿನ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುವ ಮೂಲಕ ತಮ್ಮ ಐಪಿಎಲ್ ಜರ್ನಿಯನ್ನು ಪ್ರಾರಂಭಿಸಿದರು. 2011 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, 2012 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಡಿಕೆ ಮತ್ತೆ 2014 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಮರಳಿದ್ದರು. ಬಳಿಕ 2015 ರಲ್ಲಿ ಆರ್ ಸಿಬಿ ಪರ, 2016-17 ರಲ್ಲಿ ಗುಜರಾತ್ ಲಯನ್ಸ್ ಪರ, 2018 ರಿಂದ 2021 ರವರೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಟ ಆಡಿದ್ದರು. ಇನ್ನು 2022 ರಿಂದ ಆರ್ ಸಿಬಿ ತಂಡದ ಪರ ಆಡುತ್ತಿರುವ ಡಿಕೆ ಈ ಬಾರಿಯ ಐಪಿಎಲ್ ಮೂಲಕ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.