ಪ್ಯಾರಿಸ್, ಮಾ 1(DaijiworldNews/SK): ಫ್ರಾನ್ಸ್ ಫುಟ್ ಬಾಲ್ ತಂಡದ ಪ್ರಮುಖ ಆಟಗಾರ ಪೌಲ್ ಪೋಗ್ಬಾ ಡೋಪಿಂಗ್ ಟೆಸ್ಟ್ಯಲ್ಲಿ ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಪೌಲ್ ಪೋಗ್ಬಾ ಅವರು 4 ವರ್ಷಗಳ ಮಟ್ಟಿಗೆ ಫುಟ್ಬಾಲ್ನಿಂದ ಬ್ಯಾನ್ ಆಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಷ ಅ. 20ರಂದು ನಡೆದ ಉಡಿನೆಸ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಜುವೆಂಟಸ್ 3-0 ಗೋಲ್ಗಳಿಂದ ಗೆದ್ದಿತ್ತು. ಅನಂತರ ನಡೆದ ಪರೀಕ್ಷೆಯಲ್ಲಿ ಪೋಗ್ಬಾ ಟೆಸ್ಟೊಸ್ಟೆರೋನ್ ಎಂಬ ಉದ್ದೀಪನ ದ್ರವ್ಯ ಸೇವಿಸಿದ್ದು ಖಾತ್ರಿಯಾಗಿತ್ತು. ಇದರೊಂದಿಗೆ ಅಕ್ಟೋಬರ್ನಲ್ಲಿ ಅವರ “ಬಿ’ಸ್ಯಾಂಪಲ್ನಲ್ಲೂ ಪಾಸಿಟಿವ್ ರಿಪೋರ್ಟ್ ಬಂದ ಹಿನ್ನಲೆಯಲ್ಲಿ ಇಟಲಿಯ ಡೋಪಿಂಗ್ ವಿರೋಧಿ ಪ್ರಾಸಿಕ್ಯೂಟರ್ ಕಚೇರಿಯು ಗಣನೀಯ ದಂಡ ವಿಧಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೋಗ್ಬಾ ಅವರು, “ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಇದರ ವಿರುದ್ಧ ಕ್ರೀಡಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇನೆ. ಈ ಆದೇಶದಿಂದ ನನಗೆ ಆಘಾತವಾಗಿದೆ. ಇದುವರೆಗೆ ನಾನು ವೃತ್ತಿಜೀವನದಲ್ಲಿ ಗಳಿಸಿದ ಗೌರವ, ಪ್ರತಿಷ್ಠೆ ಎಲ್ಲವನ್ನು ಕಿತ್ತುಕೊಂಡಂತಾಗಿದೆ. ಕಾನೂನು ಬಂಧನದಿಂದ ಹೊರಬಂದ ಮೇಲೆ ಎಲ್ಲದಕ್ಕೂ ಬಹಿರಂಗವಾಗಿ ಉತ್ತರ ನೀಡುತ್ತೇನೆ ಎಂದು ತಿಳಿಸಿದ್ದಾರೆ.