ನವದೆಹಲಿ, ಫೆ 14 (DaijiworldNews/PC): ಭಾರತದ ಖ್ಯಾತ ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ ಉದ್ದೀಪನ ಮದ್ದು ಸೇವನೆ ಆರೋಪಕ್ಕೆ ಒಳಗಾಗಿದ್ದು, ಎಐಯು ಬಹು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಕ್ಕಾಗಿ 12 ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾರೆ.
ಪರೀಕ್ಷೆಗಾಗಿ ರಚನಾ ಕುಮಾರಿ ಯಿಂದ ಏಷ್ಯನ್ ಗೇಮ್ಸ್ ಗೆ ಕೆಲವೇ ದಿನಗಳ ಮೊದಲು ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ ಪಡೆದಿದ್ದು ಇವರಲ್ಲಿ 30 ವರ್ಷದ ಕ್ರೀಡಾಪಟುವಿನ ಪರೀಕ್ಷಾ ಮಾದರಿಯಲ್ಲಿ ಸ್ಟನೊಝೊಲೋಲ್, ಮೆಟಂಡಯನೋನ್ ಮತ್ತು ಡೀಹೈಡ್ರೋ ಕ್ಲೋರೋಮಿತೈಲ್ಟೆಸ್ಟಾಸ್ಟಿರೋನ್ ಎಂಬ ಸ್ಟೀರಾಯ್ಡ್ ಗಳು ಪತ್ತೆಯಾಗಿದ್ದವು.
ರಚನಾ ಕುಮಾರಿ ಅವರನ್ನು ನಿಷೇಧಿತ ವಸ್ತುವಿನ ಇರುವಿಕೆ, ಬಳಕೆಗಾಗಿ ನವೆಂಬರ್ 24, 2023 ರಿಂದ 12 ವರ್ಷಗಳ ಕಾಲ ನಿಷೇಧಿಸಲಾಗಿದೆ ಎಂದು ಎಐಯು ಟ್ವೀಟ್ ನಲ್ಲಿ ತಿಳಿಸಿದೆ.