ಇಸ್ಲಾಮಾಬಾದ್,ಜ 30 (DaijiworldNews/RA):60 ವರ್ಷಗಳಲ್ಲಿ ಮೊದಲ ಬಾರಿ ಭಾರತ ಟೆನಿಸ್ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಭಾರತ ಡೇವಿಸ್ ಕಪ್ ತಂಡಕ್ಕೆ ದೇಶದ ಗಣ್ಯರಿಗೆ ಒದಗಿಸುವ ರೀತಿಯ ಭದ್ರತೆಯನ್ನೇ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.
ಫೆ.3 ಮತ್ತು 4ರಂದು ಈ ಪಂದ್ಯಾಟ ನಡೆಯಲಿದ್ದು ಭಾರತದ ತಂಡದಲ್ಲಿ ಐವರು ಆಟಗಾರರು, ಇಬ್ಬರು ಫಿಸಿಯೋಗಳು ಮತ್ತು ಇಬ್ಬರು ಎಐಟಿಎ ಅಧಿಕಾರಿಗಳನ್ನು ಒಳಗೊಂಡ ತಂಡ ಭಾನುವಾರ ರಾತ್ರಿ ಇಸ್ಲಾಮಾಬಾದ್ ನ್ನು ತಲುಪಿದೆ.
ಪಂದ್ಯಗಳು ನಡೆಯುವ ಇಸ್ಲಾಮಾಬಾದ್ ಸ್ಪೋರ್ಟ್ ಕ್ಲಾಂಪೆಕ್ ನಲ್ಲಿ ಬಾಂಬ್ ನಿಷ್ಕ್ರಿಯದಳ ದಿನ ನಿತ್ಯ ಬೆಳಿಗ್ಗೆ ತಪಾಸಣೆ ಮಾಡಲಿದೆ. ಆಟಗಾರರ ಸುರಕ್ಷತೆ, ಭದ್ರತೆ ಖಚಿತಪಡಿಸಿಕೊಳ್ಳಲು ಅತಿಥಿ ಗಣ್ಯರಿಗೆ ನೀಡುವ ಬಹುಸ್ತರದ ಭದ್ರತಾ ವ್ಯವಸ್ಥೆ ಜೊತೆಗೆ ತಂಡ ಪ್ರಯಾಣಿಸುವ ವೇಳೆ ಎರಡು ಬೆಂಗಾವಲು ವಾಹನ ಒದಗಿಸಲಾಗಿದೆ. ಭಾರತ ಡೇವಿಸ್ ಕಪ್ ತಂಡ 1964 ರಲ್ಲಿ ಕೊನೆಯ ಬಾರಿ ಪಾಕಿಸ್ತಾನಕ್ಕೆ ತೆರಳಿದ್ದು 4–0 ಅಂತರದಿಂದ ಜಯಗಳಿಸಿತ್ತು.
ಇತ್ತ ಪಿಟಿಎಫ್ ಪ್ರಧಾನ ಕಾರ್ಯದರ್ಶಿ ಕರ್ನಲ್ ಗುಲ್ ರೆಹಮಾನ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು ‘60 ವರ್ಷಗಳ ನಂತರ ಭಾರತ ತಂಡ ಪಾಕಿಸ್ತಾನಕ್ಕೆ ಬಂದಿರುವ ಕಾರಣ ಹೆಚ್ಚುವರಿ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದೇವೆ.ಭಾರತ ತಂಡಕ್ಕೆ ನಾಲ್ಕರಿಂದ ಐದು ಹಂತಗಳ ಭದ್ರತೆ ಕಲ್ಪಿಸಲಾಗಿದೆ.