ನವದೆಹಲಿ, ಜ ೨೦ (DaijiworldNews/SK): ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದೆ. 2028ರ ವರೆಗೆ ಐಪಿಎಲ್ ಪ್ರಾಯೋಜಕತ್ವ ಪಡೆದಿರುವ ಟಾಟಾ ಸಂಸ್ಥೆಯು ಪ್ರತಿ ಆವೃತ್ತಿಗೆ ಬಿಸಿಸಿಐಗೆ ₹500 ಕೋಟಿ ಪಾವತಿಸಲಿದೆ.
ಕಳೆದ ವರ್ಷ ಡಿ. 12 ರಂದು ಬಿಸಿಸಿಐಯು ಈ ಪ್ರಾಯೋಜಕತ್ವಕ್ಕೆ ಟೆಂಡರ್ ನೀಡಿತ್ತು. ಇನ್ನು ಆದಿತ್ಯ ಬಿರ್ಲಾ ಗ್ರೂಪ್ ಕೂಡ ಜ 14 ರಂದು ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಖರೀದಿಸಲು 2500 ಕೋಟಿ ರೂಗಳನ್ನು ಬಿಡ್ ಮಾಡಿತ್ತು. ಆದರೆ ಟಾಟಾ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಐಪಿಎಲ್ ಪ್ರಶಸ್ತಿ ಪ್ರಾಯೋಜಕತ್ವವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ರೈಟ್ ಟು ಮ್ಯಾಚ್ ಕಾರ್ಡ್ ನಿಯಮದ ಪ್ರಕಾರ, ಮಾಜಿ ಪ್ರಾಯೋಜಕರು ಈ ಕಾರ್ಡ್ ಅನ್ನು ಬಳಸಿಕೊಂಡು ಮತ್ತೆ ಅದರ ಹಕ್ಕನ್ನು ತಮ್ಮಲ್ಲೇ ಉಳಿಸಿಕೊಳ್ಳಬಹುದು. ಅದರಂತೆ 2022 ಮತ್ತು 2023ರ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕನ್ನು ಖರೀದಿಸಿದ್ದ ಟಾಟಾ ಗ್ರೂಪ್, ಮತ್ತೊಮ್ಮೆ ಪ್ರಾಯೋಜಕತ್ವ ಪಡೆದುಕೊಂಡಿತು.