ಅಯೋಧ್ಯೆ, ಜ 15 (DaijiworldNews/AA): ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಇದೀಗ ಶ್ರೀ ರಾಮ ನಾಮ ಜಪ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಕೇಸರಿ ಧ್ವಜ ಹಿಡಿದು, ಜೈ ಶ್ರೀ ರಾಮ್ ಎಂದಿದ್ದಾರೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ರಾಮ ಮಂದಿರದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಜ. 14 ರಂದು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ 'ನಮ್ಮ ರಾಜ ಶ್ರೀ ರಾಮನ ಭವ್ಯ ದೇವಾಲಯ ನಿರ್ಮಾಣವಾಗಿದೆ. ರಾಮನ ಪ್ರಾಣ ಪ್ರತಿಷ್ಠಾಪನೆಗೆ ಕೇವಲ 8 ದಿನ ಬಾಕಿ ಉಳಿದಿದೆ. ಜೈ ಜೈ ಶ್ರೀ ರಾಮ್ ಎಂದು ಹೇಳಿ' ಎಂದು ಬರೆದುಕೊಂಡಿದ್ದಾರೆ.
ಡ್ಯಾನಿಶ್ ಕನೇರಿಯಾ ಅವರು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು, ಪಾಕಿಸ್ತಾನದಲ್ಲಿ ಇದ್ದರೂ ಈಗಲೂ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ಅವರು ಆಗಾಗ್ಗೆ ಪೂಜೆ ಪುನಸ್ಕಾರಗಳಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ಡ್ಯಾನಿಶ್ ಇದೇ ಮೊದಲ ಬಾರಿಯಲ್ಲ ಈ ಹಿಂದೆಯೂ ಹಲವಾರು ಬಾರಿ ಜೈ ಶ್ರೀ ರಾಮ್ ಎಂದು ಹೇಳಿದ್ದರು. ಜೊತೆಗೆ ಹಿಂದುತ್ವ ಪ್ರಚಾರ ಮಾಡಲು ಹಲವಾರು ಬಾರಿ ಯತ್ನಿಸಿದ್ದರು.