ಮೆಲ್ಬರ್ನ್, ಜ 08 (DaijiworldNews/MS): ಸ್ಪ್ಯಾನಿಷ್ ಟೆನಿಸ್ ಸೂಪರ್ಸ್ಟಾರ್, 22 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ರಾಫೆಲ್ ನಡಾಲ್ ಅವರು ಮುಂಬರುವ ಆಸ್ಟ್ರೇಲಿಯನ್ ಓಪನ್ ಆವೃತ್ತಿಯಲ್ಲಿಆಡುವುದಿಲ್ಲ ಎಂದು ಸಾಮಾಜಿಕ ತಾಣದ ಮೂಲಕ ಖಚಿತಪಡಿಸಿದ್ದಾರೆ.
ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿ 12 ತಿಂಗಳು ಟೆನಿಸ್ನಿಂದ ದೂರವಿದ್ದ 37 ವರ್ಷದ ಸ್ಪೇನ್ ತಾರೆ, ಕಳೆದ ವಾರ ಬ್ರಿಸ್ಬೇನ್ ಓಪನ್ನಲ್ಲಿ ಪಾಲ್ಗೊಂಡು, ಆಸ್ಟ್ರೇಲಿಯನ್ ಓಪನ್ಗೆ ಸಿದ್ಧತೆ ಆರಂಭಿಸಿದ್ದರು. ಆದರೆ, ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಅವರಿಗೆ ಮತ್ತೆ ನೋವು ಕಾಣಿಸಿಕೊಂಡಿದ್ದು, ಜ.14ರಿಂದ ಆರಂಭಗೊಳ್ಳಲಿರುವ ಗ್ರ್ಯಾನ್ ಸ್ಲಾಂನಲ್ಲಿ ಆಡಲು ಸಾಧ್ಯವಿಲ್ಲ ಎಂದು ನಡಾಲ್ ತಿಳಿಸಿದ್ದಾರೆ.
ಬ್ರಿಸ್ಬೇನ್ ಪಂದ್ಯಾವಳಿಯು ಸುಮಾರು ಒಂದು ವರ್ಷದ ನಂತರ ನಡಾಲ್ ಭಾಗವಹಿಸಿದ ಮೊದಲ ಸಿಂಗಲ್ಸ್ ಪಂದ್ಯವಾಗಿತ್ತು.