ಜ 03 (DaijiworldNews/PC):ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟೆಸ್ಟ್ ಪಂದ್ಯ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯದ ಮೊದಲ ದಿನದಲ್ಲೇ ಭಾರತ ಬೌಲಿಂಗ್ ದಾಳಿಗೆ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ತತ್ತರಿಸಿದೆ. ಕೇವಲ 55 ರನ್ ಪಡೆದು ಆಲೌಟ್ ಆಗಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ದಕ್ಷಿಣ ಆಫ್ರಿಕಾ ಮೊಹಮದ್ ಸಿರಾಜ್ ನಡೆಸಿದ ಮಿಂಚಿನ ಬೌಲಿಂಗ್ 6 ವಿಕೆಟ್ ಗಳನ್ನು ಕಳೆದುಕೊಂಡಿದೆ.
ಇದು ದಕ್ಷಿಣ ಆಫ್ರಿಕಾದ ಟೆಸ್ಟ್ ನ ಅತೀ ಕಡಿಮೆ ಆಲ್ ಔಟ್ ಮೊತ್ತವಾಗಿದೆ. ಟೆಸ್ಟ್ನಲ್ಲಿ ಭಾರತದ ವಿರುದ್ಧ ತಂಡವೊಂದರ ಅತಿ ಕಡಿಮೆ ಆಲ್ ಔಟ್ ಮೊತ್ತ ಇದಾಗಿದೆ.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 11 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ.
ವೇಗದ ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ಗಳಿಂದ ಹೀನಾಯವಾಗಿ ಶರಣಾಗುವಂತೆ ಸಿರಾಜ್ ತನ್ನ ಒಂಬತ್ತು ಓವರ್ಗಳಲ್ಲಿ ಕೇವಲ 15 ರನ್ಗಳನ್ನು ಬಿಟ್ಟುಕೊಟ್ಟರು.