ಮುಂಬೈ, 31 (DaijiworldNews/MR): ಶನಿವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಮಹಿಳಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಸೋಲು ಕಂಡಿದೆ. ಕೊನೆಯ ಎಸೆತದ ವರೆಗೂ ನಡೆದ ರೋಚಕ ಪಂದ್ಯದಲ್ಲಿ ಆಸೀಸ್ ಕೇವಲ 3 ರನ್ಗಳಿಂದ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಭಾರತದ ಆಟಗಾರರಲ್ಲಿ ಒಬ್ಬರಾದ ಸ್ನೇಹ್ ರಾಣಾ ಅವರು ಫೀಲ್ಡಿಂಗ್ ಮಾಡುವಾಗ ಸಹ ಆಟಗಾರ್ತಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ವಲ್ಪ ಸಮಯದ ನಂತರ, ಅವರಿಗೆ ತಲೆನೋವು ಕಾಣಿಸಿಕೊಂಡಿದರಿಂದ ಈ ವಿಷಯವನ್ನ ತಂಡದ ನಾಯಕಿ ಹರ್ಮನ್ಪ್ರಿತ್ ಕೌರ್ಗೆ ತಿಳಿಸಿದ್ದಾರೆ.
ಸ್ನೇಹ್ ರಾಣಾ ಮೈದಾನದಿಂದ ನಿರ್ಗಮಿಸಿದಾಗ ಹರ್ಲೀನ್ ಡಿಯೋಲ್ ಅವರನ್ನು ಕನ್ಕ್ಯುಶನ್ ಆಟಗಾರ್ತಿಯಾಗಿ ಮೈದಾನಕ್ಕೆ ಕಳುಹಿಸಲಾಯಿತು. ರಾಣಾ ಅವರನ್ನು ತಕ್ಷಣವೇ ಸ್ಕ್ಯಾನಿಂಗ್ಗೆ ಕರೆದೊಯ್ಯದು ಚಿಕಿತ್ಸೆ ನೀಡಲಾಗಿದೆ. ನಂತರ ಅವರು ಇನ್ನು ಮುಂದೆ ಆಟದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಮಾಹಿತಿಯನ್ನು ಟ್ವೀಟ್ ಮೂಲಕ ಪ್ರಕಟಿಸಿದೆ. “ರಾಣಾ ಫೀಲ್ಡಿಂಗ್ ಮಾಡುವಾಗ ಗಾಯಗೊಂಡು ಮೈದಾನದಿಂದ ನಿರ್ಗಮಿಸಿದರು. ಸ್ವಲ್ಪ ಸಮಯದ ನಂತರ ಅವರು ಬೌಲಿಂಗ್ಗೆ ಮರಳಿದ್ದಾರೆ. ಆದಾಗ್ಯೂ, ಅವರು ನಂತರ ತಲೆನೋವು ಎಂದು ದೂರು ನೀಡಿದ್ದಾರೆ ”ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಇನಿಂಗ್ಸ್ನ 25 ನೇ ಓವರ್ನಲ್ಲಿ ಶ್ರೇಯಾಂಕ ಪಾಟೀಲ್ ಅವರು ಬೌಲಿಂಗ್ ಮಾಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕ್ಯಾಚ್ ಪಡೆಯುವ ಅವಕಾಶವಿದ್ದಾಗ ಬೆತ್ ಮೂನಿ ಬ್ಯಾಟಿಂಗ್ ಗೆ ಮುಂದಾದರು. ಪೂಜಾ ವಸ್ತ್ರಕರ್ ಮತ್ತು ಸ್ನೇಹ್ ರಾಣಾ ಕ್ಯಾಚ್ ಹಿಡಿಯಲು ಯತ್ನಿಸಿದಾಗ ಇಬ್ಬರೂ ಡಿಕ್ಕಿ ಹೊಡೆದಿದ್ದಾರೆ. ಆ ಸಮಯದಲ್ಲಿ ರಾಣಾ ಅವರು ಗಂಭೀರ ಗಾಯಗೊಂಡರು, ಮೈದಾನಕ್ಕೆ ತಕ್ಷಣವೆ ಫಿಸಿಯೋ ಆಗಮಿಸಿ, ಅವರನ್ನು ಪರೀಕ್ಷಿಸಿ, ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ದರು. ಆಶ್ಚರ್ಯಕರವಾಗಿ, ರಾಣಾ 33 ನೇ ಓವರ್ನಲ್ಲಿ ಬೌಲಿಂಗ್ ಮಾಡಲು ಮರಳಿದರು ಮತ್ತು ತಮ್ಮ 10 ಓವರ್ಗಳಲ್ಲಿ 59 ರನ್ಗಳಿಗೆ ಒಂದು ವಿಕೆಟ್ ಪಡೆದರು. ಆದಾಗ್ಯೂ, ನಂತರ, ಅವರಿಗೆ ತಲೆನೋವು ಕಾಣಿಸಿಕೊಂಡಿದೆ.