ಡಿ 29 (DaijiworldNews/PC): ಕ್ರಿಕೆಟ್ ಟೆಸ್ಟ್ ಪಂದ್ಯಾಟವು ನಡೆಯುತ್ತಿದ್ದು ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಭಾರೀ ಅಂತರದ ಸೋಲನ್ನು ಅನುಭವಿಸಿದೆ. ದಕ್ಷಿಣ ಆಫ್ರಿಕಾವು ಸೆಂಚುರಿಯನ್ ಪಂದ್ಯವನ್ನು ಮೂರು ದಿನಗಳಲ್ಲೇ ಗೆದ್ದುಕೊಂಡರು.
ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡವು ಕೇವಲ 131 ರನ್ ಗಳಿಗೆ ಆಲೌಟಾಯಿತು. ವಿರಾಟ್ ಕೊಹ್ಲಿ ಅವರು 82 ಎಸೆತಗಳಿಂದ 76 ರನ್ ಗಳಿಸಿದರು. ಇದರಲ್ಲಿ ಅವರು 12 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದರು.
ಈ ಮೂಲಕ ವಿರಾಟ್ ಕೊಹ್ಲಿ146 ವರ್ಷದ ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ ಬರೆದರು. ಸೆಂಚುರಿಯನ್ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 38 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 76 ರನ್ ಗಳಿಸಿದ ಕೊಹ್ಲಿ ಈ ಮೂಲಕ 2023 ರಲ್ಲಿ 2000 ಕ್ಕಿಂತ ಹೆಚ್ಚು ರನ್ ಪೇರಿಸಿದ ಸಾಧನೆ ಮಾಡಿದರು.
1877ರಲ್ಲಿ ಅಧಿಕೃತ ದಾಖಲೆಯ ಪ್ರಕಾರ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ನಂತರ ಯಾವುದೇ ಆಟಗಾರನು ಈ ಸಾಧನೆಯನ್ನು ಮಾಡಿಲ್ಲ.