ಡಿ 07 (DaijiworldNews/PC): ಟಿ20 ವಿಶ್ವಕಪ್ಗಾಗಿ ಐಸಿಸಿಯು ಹೊಸ ಲೋಗೊವನ್ನು ಅನಾವರಣಗೊಳಿಸಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಆತಿಥ್ಯವಹಿಸಲಿರುವ ಪುರುಷರ ಟಿ20 ವಿಶ್ವಕಪ್ ಹಾಗೂ ಬಾಂಗ್ಲಾದೇಶದಲ್ಲಿ ನಡೆಯಲಿರುವ ಮಹಿಳಾ ಟಿ20 ವರ್ಲ್ಡ್ಕಪ್ಗಾಗಿ ಒಂದೇ ವಿನ್ಯಾಸದ ಲೋಗೊವನ್ನು ಬಳಸಿರುವುದು ವಿಶೇಷವಾಗಿದ್ದು ಪಂದ್ಯಾಟವು ಜೂನ್ 4, 2024 ರಿಂದ ಪ್ರಾರಂಭವಾಗಲಿದೆ.
ಟಿ 20 ಯ ಹೊಸ ಲೋಗೊವು ಬ್ಯಾಟ್, ಬಾಲ್ ಮತ್ತು ಎರ್ನಜಿಯನ್ನು ಸಂಕೇತಿಸುವ ಚಿಹ್ನೆಗಳನ್ನು ಬಳಸಲಾಗಿದ್ದು, ಈ ಮೂಲಕ ಉತ್ಸಾಹಭರಿತ ಟಿ20 ವಿಶ್ವಕಪ್ ಅನ್ನು ಪ್ರತಿಬಿಂಬಿಸಲಾಗಿದೆ.
ಲೋಗೊ ವಿನ್ಯಾಸದ ಅನವಾರಣದ ವಿಡಿಯೋ ವನ್ನು ಐಸಿಸಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಲೋಗೊ ಬಗ್ಗೆ ಕ್ರಿಕೆಟ್ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.