ಮಂಗಳೂರು, ಡಿ 01 (DaijiworldNews/HR): ಹರ್ಯಾಣದ ಗುರುಗ್ರಾಮದಲ್ಲಿ ನವೆಂಬರ್ 24-26ರವರೆಗೆ ನಡೆದ ಸಿಬಿಎಸ್ಇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ 2023-24ನಲ್ಲಿ ಸೈಂಟ್ ಅಲೋಶಿಯಸ್ ಗೊಂಜಾಗ ಸ್ಕೂಲ್ ನಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಯುವರಾಜ್ ಡಿ ಕುಂದರ್ 2 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಯುವರಾಜ್ ಡಿ ಕುಂದರ್ ಅವರು 2021 -22 ನೇ ಸಾಲಿನಲ್ಲಿ ಆರ್.ಎಸ್. ಎಪ್.ಐ ಇಂಡಿಯಾ ಇವರು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಚಾಂಪಿಯನ್ಶಿಪ್ ನಲ್ಲಿ ಗೋಲ್ಡ್ ಮೆಡಲ್ ಅನ್ನು ತಮ್ಮ ಮುಡುಗೇರಿಸಿಕೊಂಡಿದ್ದಾರೆ.
ಇನ್ನು ಮಂಗಳೂರಿನ ರೋಲರ್ ಸ್ಕೇಟಿಂಗ್ ಕ್ಲಬ್ ನಲ್ಲಿ ತರಬೇತಿ ಪಡೆಯುತ್ತಿರುವ ಯುವರಾಜ್ ಅವರಿಗೆ ಮಹೇಶ್ ಕುಮಾರ್ ಹಾಗೂ ಶ್ರವಣ್ ಮಹೇಶ್ ತರಬೇತಿ ನೀಡುತ್ತಿದ್ದಾರೆ.
ಯುವರಾಜ್ ಧೀರಜ್ ಕೋಟ್ಯಾನ್ ಮತ್ತು ವೀಣಾ ಧೀರಜ್ ದಂಪತಿಯ ಪುತ್ರ.
ದಾಯ್ಜಿವರ್ಲ್ಡ್ ಜೊತೆ ಮಾತನಾಡಿದ ಧೀರಜ್, ನನ್ನ ಮಗ ಯುವರಾಜ್ CBSE ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ನಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದಿರುವುದು ನಮಗೆಲ್ಲ ಹೆಮ್ಮೆ. ಅವರು 300 ಮೀಟರ್ಗಳಲ್ಲಿ ತಮ್ಮದೇ ಆದ ದಾಖಲೆಯನ್ನು 31.71 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದಾರೆ. ಕಳೆದ ವರ್ಷ ಯುವರಾಜ್ ಆರ್ಎಸ್ಎಫ್ಐ ಭಾರತ ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದಿದ್ದರು. ಯುವರಾಜ್ ಅವರು ಮಹೇಶ್ ಕುಮಾರ್ ಅವರಲ್ಲಿ 4.5 ವರ್ಷ ವಯಸ್ಸಿನವರಾಗಿದ್ದಾಗ ತರಬೇತಿಯನ್ನು ಪ್ರಾರಂಭಿಸಿದ್ದು, ಕಳೆದ ಆರು ವರ್ಷಗಳಲ್ಲಿ ಯುವರಾಜ್ 22 ಚಿನ್ನ, 7 ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಗಳಿಸಿದ್ದಾರೆ ಎಂದರು.