ಅಹಮದಾಬಾದ್, ನ 22 (DaijiworldNews/AA): ಸ್ಟಾಪ್ ಕ್ಲಾಕ್ ಎಂಬ ಹೊಸ ನಿಯಮವನ್ನು ಐಸಿಸಿ ಜಾರಿಗೆ ತಂದಿದೆ. ಅಹಮದಾಬಾದ್ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ನಿಯಮಗಳನ್ನು ತರಲಾಗುವುದೆಂದು ಮತ್ತು ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಬಳಸಲಾಗುವುದು ಎಂದು ಮಾಹಿತಿ ನೀಡಿದೆ.
ವಾಸ್ತವವಾಗಿ ಕ್ರಿಕೆಟ್ ಆಟದ ವೇಗವನ್ನು ಹೆಚ್ಚಿಸುವ ಸಲುವಾಗಿ ಈ ನಿಯಮ ಜಾರಿಗೆ ತರಲಾಗಿದೆ. ಓವರ್ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ಟಾಪ್ ಕ್ಲಾಕ್ ನಿಯಮವನ್ನು ತರಲಾಗಿದೆ. ಸ್ಟಾಪ್ ಕ್ಲಾಕ್ ನಿಯಮವನ್ನು ಪ್ರಾಯೋಗಿಕವಾಗಿ ಡಿ.2023 ರಿಂದ ಏ.2024 ರವರೆಗೆ ಜಾರಿಗೆ ತರಲಾಗುವುದು. ಇನ್ನು ಡಿ. 2023 ರಿಂದ ಏ. 2024 ರವರೆಗೆ ಪುರುಷರ ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಸ್ಟಾಪ್ ಕ್ಲಾಕ್ ನಿಯಮವನ್ನು ಪರಿಚಯಿಸಲು ಸಿಇಸಿ ಸಮ್ಮತಿ ನೀಡಿದೆ.
ನಿಯಮಗಳ ಅನುಸಾರ, ಬೌಲಿಂಗ್ ತಂಡವು ಹಿಂದಿನ ಓವರ್ ಮುಗಿದ ಒಂದು ನಿಮಿಷಗಳ ಒಳಗೆ ಮುಂದಿನ ಓವರ್ ಅನ್ನು ಬೌಲ್ ಮಾಡಲು ಸಿದ್ಧವಾಗಿರಬೇಕು. ಒಂದು ವೇಳೆ ಬೌಲಿಂಗ್ ತಂಡ ಸಿದ್ಧವಾಗಿರದೇ ಇದ್ದರೆ ಹಾಗೂ ಈ ರೀತಿಯ ಘಟನೆ ಇನ್ನಿಂಗ್ಸ್ನಲ್ಲಿ ಮೂರನೇ ಬಾರಿಗೆ ನಡೆದರೆ ಬೌಲಿಂಗ್ ತಂಡಕ್ಕೆ 5 ರನ್ಗಳ ದಂಡವನ್ನು ವಿಧಿಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.