ಅಹಮದಾಬಾದ್, ನ 19 (DaijiworldNews/AK): ಈ ಬಾರಿ ವಿಶ್ವಕಪ್ ಫೈನಲ್ ತಲುಪಿರೋ ಭಾರತ ತಂಡಕ್ಕೆ, ಕಪ್ ಗೆಲ್ಲೋಕೆ ಕ್ಷಣಗಣನೆ ಆರಂಭವಾಗಿದೆ. 12 ವರ್ಷಗಳ ಬಳಿಕ ಮತ್ತೆ ಟೀ ಇಂಡಿಯಾಗೆ ವರ್ಲ್ಡ್ ಚಾಂಪಿಯನ್ ಆಗೋ ಅವಕಾಶ ಒದಗಿ ಬಂದಿದೆ.
ವಿಶ್ವಕಪ್ ಆರಂಭಿಕ ಪಂದ್ಯದಿಂದಲೂ ಪ್ರಾಬಲ್ಯ ಸಾಧಿಸಿರೋ ಟೀಂ ಇಂಡಿಯಾ ಫೈನಲ್ನಲ್ಲಿ ಇಂದು ಬಲಿಷ್ಠ ತಂಡವನ್ನ ಎದುರಿಸುತ್ತಿದೆ. ಈಗಾಗಲೇ ವಿಶ್ವ ಕ್ರಿಕೆಟ್ನಲ್ಲಿ ದಾಖಲೆ ಮೂಲಕ 5 ಬಾರಿ ಚಾಂಪಿಯನ್ ಆಗಿರುವ ಏಕೈಕ ತಂಡ ಆಸ್ಟ್ರೇಲಿಯಾ ಹೊರಹೊಮ್ಮಿದೆ.
ಐದು ಬಾರಿ ಚಾಂಪಿಯನ್ ತಂಡವನ್ನ ಮೆಟ್ಟಿ ನಿಲ್ಲಬೇಕಾದ ಸವಾಲು ಎರಡು ಬಾರಿಯ ಚಾಂಪಿಯನ್ ಭಾರತ ತಂಡಕ್ಕೆ ಎದುರಾಗಿದೆ. ಇಂದಿನ ಪಂದ್ಯ ಗೆದ್ದರೆ ಭಾರತ ಮತ್ತೊಂದು ಐತಿಹಾಸಿಕ ದಾಖಲೆಗೆ ಪಾತ್ರ ಆಗಲಿದೆ.
ಆಸ್ಟ್ರೇಲಿಯಾ ಹೊರತು ಪಡಿಸಿದರೆ ಉಳಿದ ಯಾವ ದೇಶಗಳು 3 ಅಥವಾ 3ಕ್ಕಿಂತ ಹೆಚ್ಚು ಬಾರಿ ವಿಶ್ವಚಾಂಪಿಯನ್ ಆಗಿಲ್ಲ. ವೆಸ್ಟ್ ಇಂಡೀಸ್, ಮತ್ತು ಭಾರತ ತಂಡ ಎರಡು ಬಾರಿ ಮಾತ್ರ ಕಪ್ ಗೆದ್ದಿದೆ. ಉಳಿದಂತೆ ಇಂಗ್ಲೆಂಡ್ , ಪಾಕಿಸ್ತಾನ , ಶ್ರೀಲಂಕಾ ತಂಡಗಳು ತಲಾ ಒಂದು ಬಾರಿ ಮಾತ್ರ ಗೆದ್ದಿರೋದು.
ಸದ್ಯ ಈ ಬಾರಿ ಭಾರತ ಫೈನಲ್ ಪಂದ್ಯ ಗೆದ್ದರೆ ಅತೀ ಹೆಚ್ಚು ವಿಶ್ವಕಪ್ ಗೆದ್ದ ತಂಡಗಳ ಪೈಕಿ ಎರಡನೇ ಸ್ಥಾನಕ್ಕೆ ತಲುಪಲಿದೆ. ಜೊತೆಗೆ ಮೂರನೇ ಬಾರಿಗೆ ಕಪ್ ಗೆಲ್ಲುವ ಎರಡನೇ ತಂಡ ಅನ್ನೋ ಖ್ಯಾತಿಗೂ ಕೂಡ ಒಳಗಾಗಲಿದೆ.
ಒಟ್ಟಾರೆ ಇಡೀ ದೇಶವೇ ಭಾರತದ ಫೈನಲ್ ಪಂದ್ಯ ಗೆಲುವಿಗೆ ಕಾತರದಿಂದ ಕಾದು ಕುಳಿತಿದ್ದಾರೆ. ಇಂದಿನ ಪಂದ್ಯದಲ್ಲೂ ಟೀಂ ಇಂಡಿಯಾ ಅಜೇಯ ಓಟ ಮುಂದುವರಿಸುವ ಮೂಲಕ ಮತ್ತೊಮ್ಮೆ ವಿಶ್ವ ಕ್ರಿಕೆಟ್ನಲ್ಲಿ ಚಾಂಪಿಯನ್ ಆಗಿ ಬರಲಿ ಅಂತಾ ಶುಭ ಕೋರುತ್ತಾ. ಆಲ್ ದಿ ಬೆಸ್ಟ್ ಟೀಂ ಇಂಡಿಯಾ.