ಬೆಂಗಳೂರು,ನ 11 (DaijiworldNews/AK) : ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಭಾರತ ತಂಡವು ಲೀಗ್ ಹಂತದಲ್ಲಿ ಆಡಿದ ಎಲ್ಲಾ ಎಂಟು ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನದಲ್ಲಿ ಸೆಮಿ ಫೈನಲ್ ಎಂಟ್ರಿ ಕೊಟ್ಟಿದೆ. ಕೊನೆಯ ಪಂದ್ಯವನ್ನು ರೋಹಿತ್ ಬಳಗ ನೆದರ್ಲ್ಯಾಂಡ್ ವಿರುದ್ದ ಆಡಲಿದೆ.
ನಗರದಲ್ಲಿ ರವಿವಾರ ನಡೆಯಲಿರುವ ಪಂದ್ಯಕ್ಕೂ ಮುನ್ನ ಕೋಚ್ ರಾಹುಲ್ ದ್ರಾವಿಡ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ರೋಹಿತ್ ನಿಸ್ಸಂಶಯವಾಗಿ ಲೀಡರ್. ಅವರು ಮೈದಾನದ ಒಳಗೆ ಮತ್ತು ಹೊರಗೆ ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ ಎಂದು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ದ್ರಾವಿಡ್ ಹೇಳಿದರು.
ತಂಡದ ಧ್ಯೇಯೋದ್ದೇ ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ರೋಹಿತ್ ಇತರರಿಗೆ ಮಾದರಿ. ಇದು ಭಾರತೀಯ ಡ್ರೆಸ್ಸಿಂಗ್ ರೂಂನಲ್ಲಿ ಭಾರಿ ಪ್ರಭಾವವನ್ನು ಸೃಷ್ಟಿಸಿದೆ ಎಂದು ಹೇಳಿದರು.
ರೋಹಿತ್ ಅವರ ನಾಯಕತ್ವ ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇ ನೆ. ಅವರು ಖಂಡಿತವಾಗಿಯೂ ತಂಡ ಮತ್ತು ಕೋಚಿಂಗ್ ಸಿಬ್ಬಂದಿಯ ಗೌರವವನ್ನು ಪಡೆದ ವ್ಯಕ್ತಿ ಎಂದು ದ್ರಾವಿಡ್ ಪ್ರಶಂಸೆ ವ್ಯಕ್ತಪಡಿಸಿದರು.