ಮಂಗಳೂರು , ನ 10 (DaijiworldNews/AK): ಧರ್ಮ ಪ್ರ್ಯಾಂತ್ಯದ ಎಲ್ಲಾ ಕ್ರಿಕೆಟ್ ಆಟಗಾರರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಕಥೊಲಿಕ್ ಸ್ಪೋರ್ಟ್ಸ್ ಎಸೋಸಿಯೇಷನ್ ನಿಂದ ಕಥೊಲಿಕ್ ಫ್ರೀಮಿಯರ್ ಲೀಗ್ 2023 ಸೀಸನ್ -1 ಪಂದ್ಯಾಟ ಆಯೋಜಿಸಿದೆ.
200 ಕ್ಕೂ ಹೆಚ್ಚು ಆಟಗಾರರನ್ನು ಬಿಡ್ಡಿಂಗ್ ಮಾಡುವ ಮೂಲಕ 10 ತಂಡಗಳಾಗಿ ವಿಂಗಡಿಸಿ ಹತ್ತು ತಂಡಗಳನ್ನು 'ಎರಡು ಪೂಲ್ ಮಾಡಿ ಲೀಗ್ ಮಾದರಿಯ ಪಂದ್ಯಾಟವು ನವಂಬರ್ 11 ಮತ್ತು 12 ರಂದು ನಡೆಯಲಿದೆ.
ಆಟದ ಮೂಲಕ ಕ್ರಿಸ್ಟಿಯನ್ ಯುವಕರು ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸಮಾಜದಲ್ಲಿ ಪ್ರೀತಿ ಸಂಹಬಾಳ್ವೆ ಸೌಹಾರ್ದತೆಗೆ ಒತ್ತು ನೀಡಿ ಮೊಬೈಲ್ ಹಾಗೂ ಇತರ ಅಮಲು ಪದಾರ್ಥಗಳು ದುಶ್ಚಟಗಳಿಗೆ ಬಲಿಯಾಗದಂತೆ ತಡೆದು ಸಕಾರಾತ್ಮಕ ಸ್ಪರ್ಧಾತ್ಮಕ ಜೀವನಕ್ಕೆ ಪ್ರೇರೇಪಿಸುವುದೇ ಈ ಪಂದ್ಯಾಟದ ಉದ್ದೇಶವಾಗಿದೆ.
ನ. 11 ರಂದು ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ರೋಹನ್ ಕಾರ್ಪೊರೇಶನ ಮಾಲಕರಾದ ರೋಹನ್ ಮೊಂತೇರೋ ವಹಿಸಲಿದ್ದಾರೆ. ಆಶೀರ್ವಚನ ಫ ಬೆಂಜಮಿನ್ ಪಿಂಟೋ ಮುಖ್ಯ ಅಥಿತಿಗಳಾಗಿ ಯು.ಟಿ ಖಾದರ್,ಸಂಪತ್ ಶೆಟ್ಟಿ ಲೋಟಸ್ ಪ್ರಾಪರ್ಟಿಸ್ ಉಮಾನಾಥ ಕೋಟ್ಯಾನ್, ಮಿಥುನ್ ರೈ,ಪ್ರಾನ್ಸಿಸ್ ಡಿಸೋಜ ಎಫ್ ಪೋರ್ ಹೋಲ್ಡಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭಕ್ಕೆ ವೇದವ್ಯಾಸ ಕಾಮತ್ ,ಜೋಯ್ಲಸ್ ಡಿಸೋಜ, ರಾಜೇಶ್ ಮೆಂಡಿಸ್ ಮುಖ್ಯ ಅಥಿತಿಗಳಾಗಿದ್ದಾರೆ.ಈ ಪಂದ್ಯಾಟವು ಸಾಹಿತಿ ಕ್ರಿಕೆಟ್ ಆಟಗಾರ ಕಥೊಲಿಕ್ ಸ್ಪೋರ್ಟ್ಸ್ ಏಸೋಸಿಯೇಷನ್ ಸ್ಥಾಪಕರು ಹಾಗೂ ಅಧ್ಯಕ್ಷರು ಆದ ವಿನೋದ್ ಪಿಂಟೋ ತಾಕೊಡೆಯವರ ಮುಂದಾಳುತ್ವದಲ್ಲಿ ನಡೆಯಲಿರುವುದು