ಬೆಂಗಳೂರು: ನ 04 (DaijiworldNews/MR): ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 35ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ನ್ಯೂಜಿಲ್ಯಾಂಡ್ನ ರಚಿನ್ ರವೀಂದ್ರ ಭರ್ಜರಿ ಶತಕ ಸಿಡಿಸಿದ್ದಾರೆ.
ನ್ಯೂಜಿಲ್ಯಾಂಡ್ನ ಭರವಸೆಯ ಯುವ ಎಡಗೈ ಬ್ಯಾಟ್ಸ್ ಮನ್ ರಚಿನ್ ರವೀಂದ್ರ ಅವರು ಪಾಕ್ ವಿರುದ್ಧ ಅಮೋಘ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
94 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಇಂದ 108 ರನ್ ಗಳಿಸುವ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 25 ವರ್ಷಕ್ಕೂ ಮುನ್ನ ಅತಿಹೆಚ್ಚು ಶತಕ ಗಳಿಸಿದ ಬ್ಯಾಟ್ಸ್ ಮನ್ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರಚಿನ್ ರವೀಂದ್ರ ಅವರು ಮುರಿದು ವಿಶೇಷ ದಾಖಲೆ ನಿರ್ಮಿಸಿದ್ದಾರೆ.
25 ವರ್ಷದ ಹಿಂದೆ ಸಚಿನ್ ಅವರು 2 ಶತಕಗಳನ್ನು ಗಳಿಸಿದ್ದರು. ಆದರೆ ಚೊಚ್ಚಲ ವಿಶ್ವಕಪ್ ಆಡುತ್ತಿರುವ ರಚಿನ್ ಏಕದಿನ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಮೂರನೇ ಶತಕವಾಗಿದೆ.