ಮುಂಬೈ, ನ 2 (DaijiworldNews/PC): ಕ್ರಿಕೆಟ್ ಕ್ಷೇತ್ರದಲ್ಲಿ ಅತ್ಯುತ್ತಮ ಮೈಲುಗಲ್ಲು ಸಾಧಿಸಿದ್ದ ಖ್ಯಾತ ಕ್ರಿಕೆಟಿಗ ‘ಭಾರತ ರತ್ನ’ ಸಚಿನ್ ತೆಂಡೂಲ್ಕರ್ ಇವರ ಸುಮಾರು 22 ಅಡಿಯ ಉದ್ದವಿರುವ ಪ್ರತಿಮೆಯನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅನಾವರಣ ಮಾಡಲಾಗಿದೆ.
ಪ್ರತಿಮೆಯನ್ನು ಹೆಸರಾಂತ ಚಿತ್ರ ಕಲಾವಿದ, ಶಿಲ್ಪಿಯವರಾದ ಪ್ರಮೋದ್ ಕಾಳೆ ನಿರ್ಮಿಸಿದ್ದು ಅದರ ಮೇಲೆ ಸಚಿನ್ ಅವರ ಪೂರ್ಣ ಹೆಸರನ್ನೂ ಬರೆಯಲಾಗಿದೆ.
ಮುಂದಿನ ದಿನಗಳಲ್ಲಿ ಹೊಸ ಆಟಗಾರರಿಗೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಈ ಪ್ರತಿಮೆಯನ್ನು ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ಅನಾವರಣ ಮಾಡಿದೆ. ಪ್ರತಿಮೆಯನ್ನು ಸಚಿನ್ ತೆಂಡೂಲ್ಕರ್ ಅವರ ಸಮ್ಮುಖದಲ್ಲಿ , ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಇನ್ನು ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆಯನ್ನು ಸಾರುವ ಈ ಪ್ರತಿಮೆಯು ಸಿಕ್ಸರ್ ಬಾರಿಸುವ ಭಂಗಿಯಲ್ಲಿ ಪ್ರತಿಮೆ ಇದ್ದು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಿದೆ.