ಧರ್ಮಶಾಲಾ, ಅ 22 (DaijiworldNews/HR): ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ಏಕದಿನದಲ್ಲಿ 2000 ರನ್ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಗಿಲ್ 38 ಇನ್ನಿಂಗ್ಸ್ಗಳಲ್ಲಿ ಮೈಲಿಗಲ್ಲನ್ನು ತಲುಪಿದ್ದು, 40 ಇನ್ನಿಂಗ್ಸ್ಗಳಲ್ಲಿ 2000 ಏಕದಿನ ರನ್ಗಳನ್ನು ಗಳಿಸಸಿದ್ದ ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ ಅವರ ದಾಖಲೆಯನ್ನು ಮುರಿದಿದ್ದಾರೆ.
ಇನ್ನು ಗಿಲ್ ಅವರು ಬಾಂಗ್ಲಾದೇಶದ ವಿರುದ್ಧ 53 ರನ್ ಗಳಿಸಿ ಔಟಾಗಿದ್ದರು. ಆಗ 14 ರನ್ಗಳ ಕೊರತೆಯಿತ್ತು. ರನ್ ಚೇಸ್ ವೇಳೆ ಏಳನೇ ಓವರ್ನಲ್ಲಿ ಬೌಲ್ಟ್ ಅವರು ಎಸೆದ ಚೆಂಡನ್ನು ಬೌಂಡರಿಗೆ ಹೊಡೆದು ಈ ಸಾಧನೆ ಮಾಡಿದ್ದಾರೆ.