ಹ್ಯಾಂಗ್ಝೂ, ಅ 01 (DaijiworldNews/AK): ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಪುರುಷರ ಟ್ರ್ಯಾಪ್ ಶೂಟಿಂಗ್ನಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೊರಾವರ್ ಸಿಂಗ್ ಸಂಧು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪುರುಷರ ತಂಡವು ಒಟ್ಟು 361 ಅಂಕಗಳೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಕುವೈತ್ನ ಖಲೀದ್ ಅಲ್ಮುದಾಫ್, ತಲಾಲ್ ಅಲ್ರಾಶಿದಿ ಮತ್ತು ಅಬ್ದುಲ್ ರಹಮಾನ್ ಅಲ್ಪೈಹಾನ್ ಒಟ್ಟು 359 ಅಂಕಗಳನ್ನು ಪಡೆದುಕೊಂಡಿದ್ದು, ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಚೀನಾದ ಯುಹಾವೊ ಗುವೊ, ಯಿಂಗ್ ಕಿ ಮತ್ತು ಯುಹಾವೊ ವಾಂಗ್ ಒಟ್ಟು 354 ಅಂಕ ಪಡೆದು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.
ಮಹಿಳಾ ಟ್ರ್ಯಾಪ್ ಟೀಮ್ ಈವೆಂಟ್ನಲ್ಲಿ ಮನೀಶಾ ಕೀರ್, ಪ್ರೀತಿ ರಜಾಕ್ ಮತ್ತು ರಾಜೇಶ್ವರಿ ಕುಮಾರಿ ಅವರು ಬೆಳ್ಳಿ ಪದಕವನ್ನು ಪಡೆದಿದ್ದಾರೆ.