ಕೊಲಂಬೊ, ಸೆ 17 (DaijiworldNews/AK) : ಪ್ರೇಮದಾಸ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಬೌಲರ್ ಮೊಹಮ್ಮದ್ ಸಿರಾಜ್ ಸಂಭ್ರಮಿಸಿದ್ದಾರೆ. ಪಂದ್ಯ ಆರಂಭದಲ್ಲೇ ಸಿರಾಜ್ ಪ್ರಬಲ ಚೆಂಡಿನ ದಾಳಿಗೆ ಲಂಕಾ ಪಡೆ ಧೂಳಿ ಪಟವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಶ್ರೀಲಂಕಾ.
ಬುಮ್ರಾ ಮತ್ತು ಸಿರಾಜ್ ದಾಳಿ ಎದುರಿಸಲು ಕಂಗೆಟ್ಟ ಲಂಕಾ ಕೇವಲ 12 ರನ್ ಗೆ ಆರು ವಿಕೆಟ್ ಕಳೆದುಕೊಂಡಿದೆ. ಅದರಲ್ಲಿ ಭರ್ಜರಿ ಐದು ವಿಕೆಟ್ ಗಳು ಸಿರಾಜ್ ಕೈ ಸೇರಿದೆ.
ಮೊದಲ ವಿಕೆಟ್ ಕುಸಾಲ್ ಪೆರೆರಾ ರೂಪದಲ್ಲಿ ಬುಮ್ರಾ ಪಾಲಾಯಿತು. ತನ್ನ ಮೊದಲ ಓವರ್ ಮೇಡನ್ ಮಾಡಿದ ಸಿರಾಜ್ ಮುಂದಿನ ಓವರ್ ನಲ್ಲಿ ಬರೋಬ್ಬರಿ ನಾಲ್ಕು ವಿಕೆಟ್ ಪಡೆಯುವಲ್ಲಿ ಯಶಸ್ಸಿಯಾದರು.. ಪತ್ತುಮ್ ನಿಸಾಂಕಾ, ಸದೀರಾ ಸಮರವಿಕ್ರಮ, ಚರಿತ ಅಸಲಂಕಾ ಮತ್ತು ಧನಂಜಯ ಡಿಸಿಲ್ವಾ ಅವರನ್ನು ಸಿರಾಜ್ ಐದು ಎಸೆತಗಳ ಅಂತರದಲ್ಲಿ ಔಟ್ ಮಾಡಿದರು.
ತನ್ನ ಮುಂದಿನ ಓವರ್ ನಲ್ಲಿ ನಾಯಕ ದಸುನ್ ಶನಕಾ ಬೌಲ್ಡ್ ಮಾಡಿದರು.ಇದೇ ವೇಳೆ ಸಿರಾಜ್ ಒಂದೇ ಓವರ್ ನಲ್ಲಿ ನಾಲ್ಕು ವಿಕೆಟ್ಗಳನ್ನು ಉರುಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಮತ್ತು ಮೊದಲ ಭಾರತೀಯರಾಗಿದ್ದಾರೆ.