ಬೆಂಗಳೂರು, ಸೆ 15 (DaijiworldNews/HR): ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಯೋ-ಯೋ ಟೆಸ್ಟ್ನಲ್ಲಿ ಮಯಾಂಕ್ ಅಗರ್ವಾಲ್ ಅವರು ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಭಾರತ ತಂಡದಲ್ಲಿರುವ ಆಟಗಾರರನ್ನೇ ಮೀರಿಸಿದ್ದಾರೆ.
ಕರ್ನಾಟಕದ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್, ಫಿಟ್ನೆಸ್ ಪರೀಕ್ಷೆಯಲ್ಲಿ 21.1 ಅಂಕ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.
ಇನ್ನು ಯೋ-ಯೋ ಫಿಟ್ನೆಸ್ ಟೆಸ್ಟ್ನಲ್ಲಿ ತಾನು ಪಡೆದಿರುವ ಅಂಕಗಳನ್ನು ಮಯಾಂಕ್ ಅಗರ್ವಾಲ್ ಬಹಿರಂಗಪಡಿಸಿದ್ದು, ಇತ್ತೀಚೆಗೆ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಯೋ-ಯೋ ಟೆಸ್ಟ್ನಲ್ಲಿ ಭಾಗಿಯಾಗಿದ್ದರು.
ರಾಟ್ ಕೊಹ್ಲಿ 17.2 ಅಂಕ ಪಡೆದಿದ್ದರೆ, ಗಿಲ್ 18.7 ಅಂಕ ಪಡೆದಿದ್ದು, ಇದೀಗ ಮಯಾಂಕ್ ಅಗರ್ವಾಲ್ ಅವರು 21.1 ಅಂಕ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.