ನವದೆಹಲಿ, ಆ 30 (DaijiworldNews/SM): ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿ ಕ್ಷಣಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ನಿರಾಸೆಯ ಸುದ್ದಿಯೊಂದನ್ನು ನೀಡಿದ್ದು, ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಭಾರತ ತಂಡದ ಮೊದಲೆರಡು ಪಂದ್ಯಗಳಿಗೆ ತಂಡದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅಲಭ್ಯರಾಗಲಿದ್ದಾರೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ ಈ ವಿಚಾರ ಬಹಿರಂಗಪಡಿಸಿದ್ದು, ಕೆ.ಎಲ್. 2023ರ ಏಷ್ಯಾಕಪ್ನ ಮೊದಲ ಎರಡು ಪಂದ್ಯಗಳಿಗೆ ರಾಹುಲ್ ಅಲಭ್ಯರಾಗಲಿದ್ದಾರೆ. ಭಾರತದ ಮೊದಲ ಗುಂಪಿನ ಪಂದ್ಯದಲ್ಲಿ ಸೆಪ್ಟೆಂಬರ್ 2 ರಂದು ಪಾಕಿಸ್ತಾನದ ವಿರುದ್ಧ ಮತ್ತು ಇನ್ನೊಂದು ಸೆಪ್ಟೆಂಬರ್ 4 ರಂದು ನೇಪಾಳದ ವಿರುದ್ಧ ನಡೆಯಲಿದೆ.
"ಕೆಎಲ್ ರಾಹುಲ್ ನಿಜವಾಗಿಯೂ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾರೆ. ಆದರೆ ಏಷ್ಯಾ ಕಪ್ನ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧ - ಭಾರತದ ಮೊದಲ ಎರಡು ಪಂದ್ಯಗಳಿಗೆ ಲಭ್ಯವಿರುವುದಿಲ್ಲ" ಎಂದು ದ್ರಾವಿಡ್ ಹೇಳೆಕೆಯನ್ನು ಉಲ್ಲೇಖಿಸಿ ಬಿಸಿಸಿಐ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ. ಮೊದಲ ಎರಡು ಪಂದ್ಯಗಳ ನಂತರ ವಿಕೆಟ್ ಕೀಪರ್-ಬ್ಯಾಟರ್ ಪುನರಾಗಮನ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ದ್ರಾವಿಡ್ ಹೇಳಿದ್ದಾರೆ ಎನ್ನಲಾಗಿದೆ.