ನವದೆಹಲಿ,ಜು 23 (DaijiworldNews/MS): ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಜತೆ ಅನುಚಿತವಾಗಿ ವರ್ತಿಸಿದ್ದ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಸಿಂಗ್ ವಿರುದ್ಧ ಐಸಿಸಿ ಶಿಸ್ತು ಕ್ರಮ ಕೈಗೊಂಡಿದೆ. ಅವರಿಗೆ ಪಂದ್ಯ ಶುಲ್ಕದ ಶೇ.75ರಷ್ಟು ದಂಡ ವಿಧಿಸಿ ಮೂರು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ. 24 ತಿಂಗಳೊಳಗೆ ಹರ್ಮನ್ ಮೇಲೆ ಮತ್ತೊಂದು ಡಿಮೆರಿಟ್ ಪಾಯಿಂಟ್ ಹೇರಿದರೆ, ಆಕೆಗೆ ಒಂದು ಟೆಸ್ಟ್ ಪಂದ್ಯ ಅಥವಾ ಎರಡು ಏಕದಿನ ಪಂದ್ಯಗಳಿಗೆ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ವರ್ತನೆಗೆ ಬಾಂಗ್ಲಾದೇಶದ ನಾಯಕಿ ನಿಗರ್ ಸುಲ್ತಾನಾ ಪ್ರತಿಕ್ರಿಯಿಸಿದ್ದುʻಇದು ಹರ್ಮನ್ಗೆ ಸಂಬಂಧಿಸಿದ ವಿಚಾರ. ಆದರೆ ಅವರು ಆ ರೀತಿ ವರ್ತಿಸಬಾರದಿತ್ತು. ಆಟಗಾರ್ತಿಯಾಗಿ ಹರ್ಮನ್ ಸೌಜನ್ಯದಿಂದ ವರ್ತಿಸಬೇಕು. ಕ್ರಿಕೆಟ್ ಶಿಸ್ತು ಮತ್ತು ಗೌರವದ ಆಟವಾಗಿದೆ ಎಂದು ನಿಗರ್ ಹೇಳಿದ್ದಾರೆ.
ಏತನ್ಮಧ್ಯೆ, ಬಾಂಗ್ಲಾದೇಶ ವಿರುದ್ಧದ ಕೊನೆಯ ಪಂದ್ಯ ಟೈ ಆಗಿದ್ದರಿಂದ ಭಾರತ 1-1 ರಿಂದ ಸರಣಿಯನ್ನು ಸಮಬಲಗೊಳಿಸಿದೆ.