ಚೆನ್ನೈ, ಏ 01(SM): ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ತಂಡವನ್ನು ಏಪ್ರಿಲ್ 20ರೊಳಗೆ ಪ್ರಕಟಿಸಲಾಗುವುದು ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಆಯ್ಕೆ ಸಮಿತಿ ಸೂಕ್ತ ತಂಡವನ್ನೇ ಪ್ರಕಟಿಸಲಿದ್ದು, ಆ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೂರ್ನಿಯ ನಿಯಮಗಳ ಪ್ರಕಾರದಲ್ಲಿ ತಂಡವನ್ನು ಪ್ರಕಟಿಸಲಾಗುವುದು. ವಿಶ್ವಕಪ್ ಆರಂಭಕ್ಕೂ 1 ವಾರ ಮೊದಲು ಅಂತಿಮ ತಂಡವನ್ನು ಪ್ರಕಟಿಸಬೇಕು. ಅದರಂತೆ ಏಪ್ರಿಲ್ 20ರೊಳಗೆ 15 ಆಟಗಾರರ ತಂಡ ಪ್ರಕಟಿಸಲಾಗುವುದುದಾಗಿ ಅವರು ತಿಳಿಸಿದ್ದಾರೆ.
2016ರ ಬಳಿಕ ನಿಯಮಗಳಲ್ಲಿ ಬದಲಾವಣೆಗಳಾಗಿವೆ. ಅದರಂತೆ ವಿಶ್ವಕಪ್ ಆರಂಭಕ್ಕೂ ಒಂದು ತಿಂಗಳ ಮೊದಲು 15 ಮಂದಿ ಆಟಗಾರರ ಅಂತಿಮ ತಂಡವನ್ನು ಪ್ರಕಟಿಸಲು ಅವಕಾಶಗಳಿವೆ.