ಹಾಂಕಾಂಗ್, ಜೂ 20 (DaijiworldNews/MS): ಹಾಂಕಾಂಗ್ನಲ್ಲಿ ನಡೆಯುತ್ತಿರುವ ಏಷ್ಯನ್ ಎಮರ್ಜಿಂಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡ ಫೈನಲ್ ಪ್ರವೇಶಿಸಿದೆ.
ಸೆಮಿಫೈನಲ್ ಪಂದ್ಯದಲ್ಲಿ ಭಾರತ ಶ್ರೀಲಂಕಾ ತಂಡವನ್ನು ಎದುರಿಸಬೇಕಿತ್ತು. ಆದರೆ ಮಳೆಯ ಕಾರಣದಿಂದ ಈ ಪಂದ್ಯ ರದ್ದಾಗಿದೆ. ಎ ಬಣದಲ್ಲಿ ಸ್ಥಾನ ಪಡೆದಿದ್ದ ಭಾರತ ಅಲ್ಲಿ ಗ್ರೂಪ್ನಲ್ಲಿ ಅಗ್ರಸ್ಥಾನ ಪಡೆದಿತ್ತು. ಶ್ರೀಲಂಕಾ ಬಿ ಬಣದಲ್ಲಿ 2ನೇ ಸ್ಥಾನಿಯಾಗಿತ್ತು.
ಗ್ರೂಪ್ ಹಂತದ ಅಗ್ರಸ್ಥಾನವನ್ನು ಭಾರತ ಪಡೆದಿದ್ದರಿಂದ ಭಾರತ ಫೈನಲ್ಗೆ ಎಂಟ್ರಿ ಪಡೆದಿದೆ.