ಅಹಮದಾಬಾದ್, ಮೇ 26 (DaijiworldNews/KH):ಇಂದು ನಡೆಯಲಿರುವ ಐಪಿಎಲ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಿ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಆಡಲಿವೆ.
ಸತತ ಎರಡನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಗುಜರಾತ್ ಟೈಟನ್ಸ್ ಹಾಗೂ ಐದು ಸಲದ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎದುರಾಳಿಯಾಗಿ ಆಟ ಆಡಲಿವೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೋದ ವರ್ಷ ನಡೆದಿದ್ದ ಫೈನಲ್ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಬಳಗವು ಪ್ರಶಸ್ತಿ ಗೆದ್ದಿತ್ತು.ಈ ಬಾರಿಯೂ ಇಲ್ಲಿಯೇ ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ನಡೆಯಲಿದ್ದು, ಚೆನ್ನೈನಲ್ಲಿ ಇತ್ತೀಚಿಗೆ ನಡೆದಿದ್ದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಎದುರು ಮಣಿದಿತ್ತು. ಆದರೆ, ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿರುವ ಹಾರ್ದಿಕ್ ಬಳಗವು ಲೀಗ್ ಹಂತದಲ್ಲಿ 20 ಅಂಕ ಗಳಿಸಿ ಮೊದಲ ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿತ್ತು. ಆದರೆ ಐಪಿಎಲ್ ಟೂರ್ನಿಯ ಫೈನಲ್ಗೆ ಹೋಗೊ ಎರಡು ತಂಡಗಳಿಗೆ ಇದು ಕೊನೆಯ ಅವಕಾಶವಾಗಿದೆ.
ಮುಂಬೈ ತಂಡವು ರೋಹಿತ್ ಶರ್ಮಾ ನಾಯಕತ್ವದ ಅಡಿಯಲ್ಲಿ ಲೀಗ್ ಹಂತದಲ್ಲಿ ನಾಲ್ಕನೇ ಸ್ಥಾನ ಗಳಿಸಿ, ಪ್ಲೇ ಆಫ್ ಪ್ರವೇಶಿಸಿತ್ತು. ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಜಯಿಸಿತ್ತು. ಚೆನೈನಲ್ಲಿ ನಡೆದ ಪಂದ್ಯದಲ್ಲಿ ಆಶಿಶ್ ಮದ್ವಾಲ್ ಐದು ವಿಕೆಟ್ ಗಳಿಸಿ ಮುಂಬೈ ತಂಡಕ್ಕೆ ಜಯ ಸಿಗುವಂತೆ ಮಾಡಿದರು.
ಇನ್ನೂ ಈ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ಹಾಗೂ ಜೋಫ್ರಾ ಆರ್ಚರ್ ಅವರಿಲ್ಲದ ಮುಂಬೈ ತಂಡಕ್ಕೆ ಆಶಿಶ್ ಹೊಸ ಭರವಸೆ ಮೂಡಿಸಿದ್ದಾರೆ. ಗುಜರಾತ್ ತಂಡದಲ್ಲಿ ಎರಡು ಶತಕ ಗಳಿಸಿದ ಶುಭಮನ್ ಗಿಲ್, ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಹಾ, ಡೇವಿಡ್ ಮಿಲ್ಲರ್, ಸ್ಪಿನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲಿಯೂ ಅಬ್ಬರಿಸುತ್ತಿರುವ ರಶೀದ್ ಖಾನ್ ಅವರನ್ನು ಕಟ್ಟಿ ಹಾಕುವಲ್ಲಿ ಆಶಿಶ್ ಯಾವ ರೀತಿ ಸೋಲಿಸ ಬಲ್ಲರು ಎಂಬ ಕುತೂಹಲ ನಿರೀಕ್ಷೆಗಳು ಮೂಡಿದೆ.