ಬೆಂಗಳೂರು, ಮೇ 21 (DaijiworldNews/SM): ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಟಿ-20 ಪಂದ್ಯದಲ್ಲಿ ಲಕ್ನೊ ವಿರುದ್ಧ ಆರ್ ಸಿಬಿ ಅಬ್ಬರಿಸಿದೆ. ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಬ್ರಮಿಸಿದ್ದಾರೆ. ಆ ಮೂಲಕ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದಂತಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭದಿಂದಲೇ ಅಬ್ಬರಿಸಿದ ಕೊಹ್ಲಿ ವಿರಾಟ ರೂಪಂ ಪ್ರದರ್ಶಿಸಿದರು. 61 ಎಸೆತಗಳಾನ್ನು ಎದುರಿಸಿದ ಕೊಹ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 101 ರನ್ ಗಳನ್ನು ಸಿಡಿಸಿದರು. ಇದರಿಂದಾಗಿ ತಂಡದ ಮೊತ್ತ 197 ದಾಖಲಿಸಲು ಸಾಧ್ಯವಾಯಿತು.
ಇನ್ನು ಹೈದರಾಬಾದ್ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ 62 ಎಸೆತಗಳಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದು, ಇದರೊಂದಿಗೆ ಐಪಿಎಲ್ ನಲ್ಲಿ 6ನೇ ಶತಕ ಗಳಿಸಿದ್ದಾರೆ. ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಇದುವರೆಗೂ ೭ ಶತಕ ಸಿಡಿಸಿದ್ದು, ವಿಶೇಷ ಎಂದರೆ 2016 ಆವೃತ್ತಿಯೊಂದರಲ್ಲೇ ಕೊಹ್ಲಿ 4 ಶತಕ ಗಳಿಸಿದ್ದರು. 2016ರ ಏಪ್ರಿಲ್ 24ರಂದು ಗುಜರಾತ್ ಲಯನ್ಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ 63 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದ್ದರು. 2016ರ ಮೇ 07 ರಂದು ಪುಣೆ ತಂಡದ ವಿರುದ್ಧ ಐಪಿಎಲ್ನಲ್ಲಿ 2ನೇ ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಅಜೇಯರಾಗಿ ಉಳಿಸಿದ್ದರು. ಇದಾದ ಒಂದು ವಾರದ ಬಳಿ ಮೇ 14ರಂದು ಗುಜರಾತ್ ಲಯನ್ಸ್ ವಿರುದ್ಧ 55 ಎಸೆತಗಳಲ್ಲಿ 109 ರನ್ ಸಿಡಿಸಿ ಕೊಹ್ಲಿ ಶತಕಗಳಿಸಿದ್ದರು. 2016ರ ಮೇ 18 ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮೊದಲ ಶತಕ ಸಿಡಿದ್ದರು. ಈ ಪಂದ್ಯದಲ್ಲಿ 113 ರನ್ ಗಳಿಸಿದ್ದು ವಿರಾಟ್ ಕೊಹ್ಲಿ ಅವರ ಐಪಿಎಲ್ ಗರಿಷ್ಠ ಸ್ಕೋರ್ ಆಗಿದೆ. ಕೋಲ್ಕತ್ತಾ ವಿರುದ್ಧ 2019 ಏಪ್ರಿಲ್ 19 ರಂದು ನಡೆದಿದ್ದ ಪಂದ್ಯದಲ್ಲಿ ಕೊಹ್ಲಿ 58 ಎಸೆತಗಳಲ್ಲೇ ಶತಕ ಸಿಡಿಸಿ ಮಿಂಚಿದ್ದರು.