ಜೈಪುರ, ಮೇ 14 (DaijiworldNews/SM): ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ಆರ್ ಸಿಬಿ ವಿರುದ್ಧ ಹೀನಾಯ ಸೋಲು ದಾಖಲಿಸಿದ್ದು, ಆ ಮೂಲಕ ಐಪಿಎಲ್ ಇತಿಹಾಸದ ಕಳಪೆ ದಾಖಲೆ ನಿರ್ಮಿಸಿದೆ.
ಜೈಪುರದಲ್ಲಿ ಇಂದು ನಡೆದ ಆರ್ಸಿಬಿ ತಂಡದ ಘಾತಕ ಬೌಲಿಂಗ್ ದಾಳಿಗೆ ತತ್ತರಿಸಿ ಹೋದ ರಾಜಸ್ತಾನ ರಾಯಲ್ಸ್ ತಂಡ ಕೇವಲ 59ರನ್ ಗಳಿಗೆ ಸರ್ವ ಸರ್ವಪತನ ಕಂಡಿದ್ದು, ರಾಜಸ್ಥಾನ ರಾಯಲ್ಸ್ ತಂಡ 112 ರನ್ ಗಳ ಅತ್ಯಂತ ಹೀನಾಯ ಸೋಲು ಕಂಡಿದೆ.
ಜೈಪುರದ ಮಾನ್ಸಿಂಗ್ ಸವಾಯ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾನುವಾರ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ರಾಯಲ್ ಚಾಜೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ಕೇವಲ 10.3 ಓವರ್ಗಳಲ್ಲಿ 59 ರನ್ಗೆ ಸರ್ವಪತನ ಕಂಡಿತು. ಗುರಿ ಬೆನ್ನಟಿದ ರಾಜಸ್ಥಾನ್ ಪರ ಕೇವಲ ಎರಡು ಆಟಗಾರರು ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು. ಉಳಿದ ಎಲ್ಲರು ಒಂದಂಕಿಗೆ ಸೀಮಿತರಾದರು. ಇದರಲ್ಲಿ ನಾಲ್ಕು ಮಂದಿ ಶೂನ್ಯಕ್ಕೆ ಔಟಾದರು. ಅಂತಿಮವಾಗಿ ರಾಜಸ್ಥಾನ ತಂಡ 10.3 ಓವರ್ ನಲ್ಲಿ 59 ರನ್ ಗಳಿಗೆ ಸರ್ವಪತನವಾಯಿತು.