ನವದೆಹಲಿ,ಮೇ11(DaijiworldNews/KH):ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಭೂಷಣ್ ಶರಣ್ ಸಿಂಗ್ ಮಂಪರು ಪರೀಕ್ಷೆ ನಡೆಸುವಂತೆ ಕುಸ್ತಿಪಟುಗಳು ಸವಾಲು ಹಾಕಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದ 16 ದಿನಗಳಿಂದ ಕುಸ್ತಿ ಪಟುಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಕುಸ್ತಿಪಟು ಸಾಕ್ಷಿ ಮಲಿಕ್, ಬ್ರಿಜ್ ಭೂಷಣ್ ಶರಣ್ ಸಿಂ ತಪ್ಪಿಸ್ಥರಲ್ಲ ಎಂಬ ವಿಶ್ವಾಸವಿದ್ದರೆ ಮಂಪರು ಪರೀಕ್ಷೆಗೆ ಒಳಗಾಗಲಿ, ಸುಳ್ಳು ಪತ್ತೆ ಪರೀಕ್ಷೆಯೂ ನಡೆಯಲಿ. ನಾವು (ಕುಸ್ತಿಪಟುಗಳು)ಕೂಡ ಈ ಎಲ್ಲಾ ಪರೀಕ್ಷೆ ಗಳಿಗೆ ಒಳಪಡಲು ಸಿದ್ಧರಿದ್ದೇವೆ ಸತ್ಯ ಏನೆಂದು ಜಗತ್ತಿಗೆ ತಿಳಿಯಬೇಕು.
ಭಾರತೀಯ ಒಲಂಪಿಕ್ ಅಸೋಸಿಯೇಷನ್ಗಳಲ್ಲಿ ಬ್ರಿಜ್ ಭೂಷಣ್ ಸಿಂಗ್ ಅವರು ತೊಡಗಿಕೊಂಡರೆ ನಾವು ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಲ್ಲಾ ಕೂಟವನ್ನು ನಾವು ವಿರೋಧಿಸುತ್ತೇವೆ ಎಂದು ಕುಸ್ತಿಪಟುಗಳು ಎಚ್ಚರಿಸಿದ್ದಾರೆ.